ಅಥಣಿ : ಕೇಂದ್ರ ಸರ್ಕಾರ ಎಸ್‌ಟಿ ಪ್ರಮಾಣ ಪತ್ರ ನೀಡಲು ಆದೇಶ ಹೊರಡಿಸಿದರೂ ರಾಜ್ಯ ಸರ್ಕಾರ ಪಾಲಿಸದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ವಿರುದ್ಧ ತಳವಾರ ಸಮುದಾಯ ತಿರುಗಿ ಬಿದ್ದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಸರಕಾರದ ಮಹತ್ವದ ಯೋಜನೆಯಾದ “ಕಂದಾಯ ದಾಖಲೆ ಮನೆ ಬಾಗಲಿಗೆ” ಎಂಬ ವಿನೂತನ ಯೋಜನೆ ವಿರುದ್ದ ತಳವಾರ ಸಮುದಾಯದವರು ಪ್ರವರ್ಗ-1 ರ ಜಾತಿ ಪ್ರಮಾಣ ಪತ್ರ ಗ್ರಾಮ ಪಂಚಾಯತ್ ಎದುರಿನಲ್ಲೇ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ ಕಾಟಾಚಾರಕ್ಕೆ ಸುತ್ತೋಲೆ ಹೊರಡಿಸಿದ್ದು ಬಿಟ್ಟರೆ ಅದನ್ನು ಅನುಷ್ಟಾನಕ್ಕೆ ತರುವಲ್ಲಿ ವಿಫಲವಾಗಿದೆ. ಸರ್ಕಾರದ ಯಾವುದೇ ಸುತ್ತೋಲೆಯನ್ನು ಅನುಷ್ಟಾನಕ್ಕೆ ತರುವಲ್ಲಿ ತೋರುವ ಮುತುವರ್ಜಿ ತೋರಿಲ್ಲಾ. ತಳವಾರ-ಪರಿವಾರ ಎಸ್‌ಟಿ ಪ್ರಮಾಣ ಪತ್ರದ ವಿಷಯದಲ್ಲಿ ಮೀನಾಮೇಶ ಮಾಡುತ್ತಿದೆ ಎಂದು ಅಖೀಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ರಾಮಗೊಂಡ ಜಂಗಿ ಆಕ್ರೋಶ ಹೊರಹಾಕಿದರು. ಕೂಡಲೇ ಸಂವಿಧಾನ ಬದ್ದವಾದ ನಮ್ಮ ಹಕ್ಕು ನಮಗೆ ಕೊಡಿ ಇಲ್ಲದಿದ್ದರೆ ಅಕ್ರೋಶದ ಹೋರಾಟಕ್ಕೆ ಹೆಜ್ಜೆ ಇಡಬೇಕಾಗುತ್ತೆದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ನಾಯಕ ತಳವಾರ ಹಿತರಕ್ಷಣಾ ಸಮೀತಿ ಭರಮು ಹಕ್ಕಿ, ಭೀಮು ಸನದಿ, ಅನೀಲ ನಂದೇಶ್ವರ, ಮುರುಗೇಶ ಈಟಿ, ಮಾಳು ಹಕ್ಕಿ
ಚಿಕ್ಕಯ್ಯ ಹಕ್ಕಿ, ರಾಮು ಈಟಿ, ಶ್ರೀಶೈಲ ಹಾದಿಮನಿ, ಪ್ರಶಾಂತ ಮೀಶಿ, ದೀಪಕ ಮೀಶಿ, ಲಕ್ಷ್ಮಣ ಕುಂದಗೋಳ, ಮುತ್ತುರಾಜ್ ಉಪಸ್ಥಿತರಿದ್ದರು.