ರಾಷ್ಟ್ರಕ್ಕೆ ಸಂವಿಧಾನವೇ ಭದ್ರ ಬುನಾದಿ : ಶಾಸಕ ಪಾಟೀಲ
ಇಂಡಿ: ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ೪ ಪ್ರಮುಖ ಧರ್ಮಗಳು, ೪ ಸಾವಿರ ಜಾತಿಗಳನ್ನು ಅಲ್ಲದೇ ವಿವಿಧ ಭೂಪ್ರದೇಶ, ವಿವಿಧ ಸಂಸ್ಕೃತಿ ಹೊಂದಿ ಏಕತೆಯಿಂದ ಬದುಕುವ ಈ ರಾಷ್ಟ್ರಕ್ಕೆ ಡಾ. ಬಿ.ಆರ್.ಅಂಬೇಡ್ಕರರು ರಚಿಸಿಕೊಟ್ಟಿರುವ ಸಂವಿಧಾನವೇ ಭದ್ರ ಬುನಾದಿಯಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಭಾನುವಾರ ಪಟ್ಟಣದ ವಿಜಯಪುರ ರಸ್ತೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶದ ಲಕ್ಷಾಂತರ ದೇಶಪ್ರೇಮಿಗಳು ತಮ್ಮ ಜೀವನವನ್ನೇ ಪುಡಿಪಾಗಿಟ್ಟು ಸ್ವಾತಂತ್ರ‍್ಯ ತಂದುಕೊಟ್ಟಿದ್ದಾರೆ. ಅವರೆಲ್ಲರನ್ನೂ ನೆನಪಿಸಿಕೊಳ್ಳುವ ದಿನವಾಗಿದೆ. ಅವರ ತ್ಯಾಗ ಬಲಿದಾನದ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗಗಳನ್ನು ಅನುಸರಿಸಿದರೆ ನಮ್ಮ ದೇಶ ಸುಭದ್ರವಾಗುವದಲ್ಲದೇ ಪ್ರಗತಿ ಸಾಧಿಸುತ್ತದೆ ಎಂದರು. ನಮ್ಮ ದೇಶದ ಸುರಕ್ಷತೆಗಾಗಿ ಹಗಲಿರುಳೂ ನಮ್ಮ ದೇಶವನ್ನು ಕಾಯುತ್ತಿರುವ ಸೈನಿಕರನ್ನೂ ಕೂಡಾ ಗೌರವಿಸಬೇಕು. ನಾವೆಲ್ಲರೂ ಶಾಂತಿ, ಸಹನೆ, ತಾಳ್ಮೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ಎಸಿ ಅಬೀದ ಗದ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ವೈವಿಧ್ಯಮಯವಾದ ದೇಶ. ವಿವಿಧ ಭೂಮಿ ಹೊಂದಿದೆ. ನಮ್ಮ ದೇಶದಲ್ಲಿ ೪೫೦೦೦ ವಿವಿಧ ಜಾತಿಯ ಗಿಡಮರಗಳಿವೆ. ಇಷ್ಟೊಂದು ವಿವಿಧ ಜಾತಿಯ ಗಿಡಮರಗಳು ಇನ್ನಾವ ದೇಶದಲ್ಲಿಯೂ ಕಾಣುವದಿಲ್ಲ. ಕಾರಣ ಇವುಗಳನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕೆಂದು ಮನವಿ ಮಾಡಿಕೊಂಡರು.
ವೇದಿಕೆಯಲ್ಲಿ ತಹಶೀಲ್ದಾರ ಬಿ.ಎಸ್.ಕಡಕಬಾವಿ, ಡಿಎಸ್ಪಿ ಜಗದೀಶ ಎಚ್.ಎಸ್. ತಾಲ್ಲೂಕು ಪಂಚಾಯತಿ ಇಓ ನಂದೀಪ ರಾಠೋಡ, ಪುರಸಭೆಯ ಅಧ್ಯಕ್ಷ ಲಿಂಬಾಜಿ ರಾಠೋಡ, ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಇದ್ದರು.
ಇದೇ ಸಂದರ್ಭದಲ್ಲಿ ಮಹಾದೇವಪ್ಪ ಏವೂರ, ಎಚ್.ಎಸ್.ಪಾಟೀಲ, ದಯಾನಂದ ಹಿರೇಮಠ, ಪಿ.ಎಲ್.ಹೂಗಾರ, ಸಿ.ಎಸ್.ವಾಲಿಕಾರ ಇದ್ದರು.
ಪಟ್ಟಣದ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಾಧಕರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ ಬಿ.ಎಸ್.ಕಡಕಬಾವಿ ಸ್ವಾಗತಿಸಿದರು. ಬಸವರಾಜ ಗೊರನಾಳ ನಿರೂಪಿಸಿ, ವಂದಿಸಿದರು.
ಇಂಡಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.
ಇಂಡಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವದಲ್ಲಿ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ದೃಶ್ಯಗಳು.
ಇಂಡಿ: ಶಿಕ್ಷಣ ಕೇತ್ರಗಳಲ್ಲಿ ಸಾದನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.