ಇಂಡಿ: ಮೀಸಲಾತಿಗಾಗಿ ಸದನದಲ್ಲಿ ಧ್ವನಿ ಎತ್ತಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂಡಿ ಪಟ್ಟಣದಲ್ಲಿ ಹಮ್ಮಿಕೊಂಡ 2023ರ ಇಂಡಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾತಿ ಜಾತಿಗಳ ನಡುವೆ ಜಗಳ ಹಚ್ಚಿ ಕಾಂಗ್ರೆಸ್ ಜಗಳ ಹೆಚ್ಚುತ್ತಿದೆ ಎಂದು ಆರೋಪಿಸಿದರು. ಇನ್ನೂ ಜಾತಿಗಳನ್ನು ಹೊಡೆದು ಮತ ಪಡೆಯುವ ಕಾಂಗ್ರೆಸ್ ಪಕ್ಷ ಹುನ್ನಾರ ನಡೆಸುತ್ತಿದೆ.
ಇದು ಎಂದಿಗೂ ಸಾಧ್ಯವಿಲ್ಲ. ನೀವೆಲ್ಲರೂ ಪ್ರಜ್ಞಾವಂತರಾಗಬೇಕು. ಆಸೆ, ಆಮಿಷ, ಹಣಕ್ಕೆ ನಿಮ್ಮ ಮತ ನೀಡಬೇಡಿ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಪಡಿಸುವುದಾಗಿ ಹೇಳಿದ್ದಾರೆ. ಹಲವು ವರ್ಷಗಳಿಂದ ನಡೆದ ಮೀಸಲಾತಿ ಹೋರಾಟ ನಮ್ಮ ಮುಂದಿನ ಮಕ್ಕಳ ಭವಿಷ್ಯದ್ದಾಗಿದೆ. ನಮ್ಮ ಮುಂದಿನ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ನಾವು ಕಡ್ಡಾಯವಾಗಿ ಬಿಜೆಪಿ ಪಕ್ಷವನ್ನೇ ಬೆಂಬಲಿಸಬೇಕು.
ಇಲ್ಲದೇ ಹೋದರೆ ಕಾಂಗ್ರೆಸ್ನ ಅಧಿಕಾರ ನಡೆದರೆ ಎಲ್ಲಾ ಮೀಸಲಾತಿ ರದ್ದು ಮಾಡಿ ಕೋಮು ಗಲಭೆಗಳು ಪ್ರಾರಂಭವಾಗುತ್ತವೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಖಂಡಿತವಾಗಿಯೂ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದಿಂದ ಆಯ್ಕೆಯಾಗಲಿದ್ದು ನಾನು ಸಹ ನಂಬರ್ ಒನ್ ಅಥವಾ ನಂಬರ್ ಟು ಸ್ಥಾನದಲ್ಲಿ ಇರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
20,000ಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಅಭ್ಯರ್ಥಿ ಕಾಸೂಗೌಡ ಬಿರಾದಾರ, ಶಿಕ್ಷಣ ಸಚಿವ ಧಾನಸಿಂಗ್ ರಾವತ್, ಜಿಲ್ಲಾ ಅಧ್ಯಕ್ಷ ಆರ್ ಎಸ್ ಕೂಚಬಾಳ, ದಯಾಸಾಗರ ಪಾಟೀಲ, ಅನೀಲ ಜಮಾದಾರ, ಮಲ್ಲಿಕಾರ್ಜುನ ಕಿವಡೆ, ಶಂಕರ್ ಗೌಡ ಪಾಟೀಲ್, ಅಪ್ಪುಗೌಡ ಪಾಟೀಲ, ಅಶೋಕಗೌಡ ಬಿರಾದಾರ, ಶೀಲವಂತ ಉಮಾರಾಣಿ, ಮುತ್ತು ದೇಸಾಯಿ, ಸಿದ್ದಲಿಂಗ ಹಂಜಗಿ, ರವಿ ಖಾನಾಪುರ, ಸತೀಶ್ ಚಂದ್ರ ಕುಲಕರ್ಣಿ, ಅನಿಲ ಗೌಡ ಬಿರಾದಾರ ಸೋಮಶೇಖರ ದೇವರ, ಬಾಳು ಮುಳಜಿ, ರವಿ ವಗ್ಗಿ, ಶಾಂತು ಕಂಬಾರ, ರಾಜಶೇಖರ ಯರಗಲ್, ಸೋಮು ದೇವರ, ವಿಜಯಲಕ್ಷ್ಮಿ ರೂಗಿಮಠ, ಭೀಮಸಿಂಗ್ ರಾಠೋಡ, ಸೇರಿದಂತೆ ಇನ್ನಿತರರು ಇದ್ದರು.