ಭಾರತದ ದೇಶದಲ್ಲಿನ ಪ್ರತಿಶತ ೮೭% ಇರುವ ಹಿಂದುಗಳಿಗೆ 1947 ರಿಂದ 60 ವರ್ಷ ಆಳಿದ ಕಾಂಗ್ರೆಸ್ ಸರಕಾರ ಅನ್ಯಾಯ ಮಾಡುತ್ತಾ ಬಂದಿದೆ.
ನೈಜ ಇತಿಹಾಸ ಮರೆಮಾಡಿ ಹಿಂದೂಗಳನ್ನು ಗುಲಾಮರನ್ನಾಗಿಸಿದ ಕಾಂಗ್ರೆಸ್ ಸರಕಾರದ ಕಾರ್ಯವೈಖರಿ ಸಿದ್ದರಾಮಯ್ಯನ ರಾಜ್ಯ ಕಾಂಗ್ರೆಸ್ ನಲ್ಲಿ ಸಹ ಮುಂದುವರೆದಿದೆ.
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ;ಭಾರತದ ದೇಶದಲ್ಲಿನ ಪ್ರತಿಶತ ೮೭% ಇರುವ ಹಿಂದುಗಳಿಗೆ 1947 ರಿಂದ 60 ವರ್ಷ ಆಳಿದ ಕಾಂಗ್ರೆಸ್ ಸರಕಾರ ಅನ್ಯಾಯ ಮಾಡುತ್ತಾ ಬಂದಿದೆ ಇತಿಹಾಸದಲ್ಲಿ ಮೊಘಲರನ್ನು ವೈಭವಿಕರಿಸಿದೆ ಅದೇ ಇತಿಹಾಸದಲ್ಲಿ ವಿಜಯನಗರದ ಇತಿಹಾಸ ಶಿವಾಜಿ ಮಹಾರಾಜರ ಬಗ್ಗೆ ಹೇಳಲೇ ಇಲ್ಲವೆಂದು ಮಾಜಿ ಶಾಸಕ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ್ಯ ಎ.ಎಸ್ ಪಾಟೀಲ್ ನಡಹಳ್ಳಿ ಹೇಳಿದರು ಬುಧುವಾರ ಸಂಜೆ ಬಿಜೆಪಿ ಕಚೇರಿಯಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೂಂಡ ಗುರಲಿಂಗಪ್ಪ ಅಂಗಡಿ ಅವರ ಸನ್ಮಾನ ಸಮಾರಂಭ ಉದ್ದೇಶಿ ಮಾತನಾಡಿದರು ನೈಜ ಇತಿಹಾಸ ಮರೆಮಾಡಿ ಹಿಂದೂಗಳನ್ನು ಗುಲಾಮರನ್ನಾಗಿಸಿದ ಕಾಂಗ್ರೆಸ್ ಸರಕಾರದ ಕಾರ್ಯವೈಖರಿ ಸಿದ್ದರಾಮಯ್ಯನ ರಾಜ್ಯ ಕಾಂಗ್ರೆಸ್ ನಲ್ಲಿ ಸಹ ಮುಂದುವರೆದಿದೆ.
ಧರ್ಮದ ಆಧಾರದ ಮೇಲೆ ಮುಸ್ಲಿಂ ಗುತ್ತಿಗೆದಾರರಿಗೆ ೪% ಮೀಸಲಾತಿ ಕೊಡುವ ಬಿಲ್ ತರುವ ಕೆಲಸ ಮಾಡಿ ಬಿಜೆಪಿಯ 18 ಶಾಸಕರನ್ನು ಬಲವಂತವಾಗಿ ವಿಧಾನಸಭೆಯಿಂದ ಅಮಾನತ್ತು ಮಾಡಿ ಬಿಲ್ ಪಾಸ್ ಮಾಡುವ ಕುತಂತ್ರ ಸಿದ್ದ ರಾಮಯ್ಯ ನ ಕಾಂಗ್ರೆಸ್ ಸರಕಾರ ಮಾಡಿದೆ ಮತ್ತು ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಮುಸ್ಲಿಮ್ ರಿಗೆ ಮಿಸಲಾತಿ ನೀಡಲು ಸಂವಿಧಾನ ಬದಲಿಸುವ ಸಂವಿಧಾನ ಬಾಹಿರ ಹೇಳಿಕೆ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
25 ವರ್ಷ ಪಕ್ಷಕ್ಕೆ ದುಡಿದ ಅಂಗಡಿಯವರನ್ನು ಪಕ್ಷ ಗುರುತಿಸಿ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಗುರುಲಿಂಗಪ್ಪನವರನ್ನು ಆಯ್ಕೆ ಮಾಡಲಾಗಿದೆ ನಂಬಿಕೆ ದ್ರೂಹವನ್ನು ಮಾಡಿದವರನ್ನು ಈ ನಡಹಳ್ಳಿ ಯಾವತ್ತೂ ನಂಬುವುದಿಲ್ಲ ಅದು ಮನೆಯವರಾಗಿಲಿ ಹೊರಗಿನವರಾಗಿರಲಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ನಮ್ಮ ತಾಲೂಕಿನವರಿಗೆ ಹೆಚ್ಚಿನ ಅವಕಾಶವಿತ್ತು ಅದನ್ನು ಉಪಯೋಗ ಮಾಡಿಕೊಳ್ಳಲಿಲ್ಲಾ ಪಕ್ಷದ ವಿರುದ್ಧ ಕುತಂತ್ರ ಮಾಡಿದರಿ ಜಿಲ್ಲಾಧ್ಯಕ್ಷರ ಸ್ಥಾನದಲ್ಲಿ ಕುಳಿತ ವ್ಯಕ್ತಿ ನಡಹಳ್ಳಿಯನ್ನು ನೋಡದೆ ಪಕ್ಷ ನೋಡಿ ಕೆಲಸ ಮಾಡಬೇಕು ,ಬಿಜೆಪಿ ಪಕ್ಷದಲ್ಲಿ ಯಾರೆ ಪಾಪ ಮಾಡಿದರು ಅದನ್ನು ಬರೆದು ಇಡುತ್ತಾರೆ ನಾನು ಪಾಪ ಮಾಡಿದರು ಬರೆದು ಇಡುತ್ತಾರೆ ಇಲ್ಲಿ ಸುಳ್ಳು ಹೇಳಿದರೆ ನಡೆಯುವುದಿಲ್ಲ ;
ಮಾಧ್ಯಮದಲ್ಲಿ ಬರುವ ವಿಚಾರ ಬಗ್ಗೆ ತಲೆಕಡಿಸಿಕೂಳ್ಳಬೇಡಿ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಅಪ ಪ್ರಚಾರಕ್ಕೆ ಅವಕಾಶ ನೀಡದಿರಿ ನಮ್ಮ ಪಕ್ಷದ ಮೂಲ ಕಾರ್ಯಕರ್ತರ ಮನೆ ಮನೆಗೆ ಹೋಗೋಣ ಯಾರು ಸಿಟ್ಟು ಮಾಡಿಕೊಂಡಿದ್ದಾರೆ ಅವರಿಂದ ಬೈಯಿಸಿಕೂಂಡು ಅವರ ಕಾಲು ಹಿಡಿದು ಪಕ್ಷ ಕಟ್ಟುವ ಕೆಲಸವನ್ನು ಮಾಡೋಣ ಹಳೆಬೇರು ಹೊಸ ಚಿಗರು ಪಕ್ಷಕ್ಕೆ ಬೇಕು ಇಲ್ಲಿ ಎಲ್ಲಾ ಸಮಾನರು ಎಂದರು.
ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ ಕಾಂಗ್ರೆಸ್ ಸರಕಾರದಲ್ಲಿ ಯಾರೊಬ್ಬರೂ ನೆಮ್ಮದಿ ಇಲ್ಲಾ ಬಿಜೆಪಿ ಸರಕಾರದ ಸಮಯದಲ್ಲಿ ಪಂಚಮಸಾಲಿ ಸಮಾಜ 2ಎ ಮೀಸಲಾತಿ ಗೆ ಹೋರಾಟ ಮಾಡಿದಾಗ ಅವರ ಮನವಿ ಸ್ವೀಕರಿಸಿ ಅವರಿಗೆ2ಡಿ 2ಸಿ ನೀಡುವ ಪ್ರಯತ್ನ ಮಾಡಿತ್ತು ಆದರೆ ಕಾಂಗ್ರೆಸ್ ಸರಕಾರ ಅವರಿಗೆ ಲಾಠಿ ಚಾರ್ಜ್ ಮಾಡಿತು ಯಾವ ಸಮಾಜವು ಕಾಂಗ್ರೆಸ್ ಪಕ್ಷದೂಂದಿಗೆ ಇಲ್ಲಾ ಯಾವೂಂದು ಸಮಾಜದ ನಿಗಮಕ್ಕೆ ಒಂದು ರೂ ಅನುದಾನ ನೀಡಿಲ್ಲ ಪಂಚಮಸಾಲಿ ಸಮಾಜ ಸಹ ಕಾಂಗ್ರೆಸ್ ಪಕ್ಷದಿಂದ ದೂರವಾಗಿದೆ ಹೀಗಾಗಿ ಕಾಂಗ್ರೆಸ್ ಮುಸ್ಲಿಮರನ್ನು ಕಾಯ್ದುಕೊಳ್ಳಲು ಮುಸ್ಲಿಮ್ ರಿಗೆ ಮೀಸಲಾತಿ ಎಂದು ಮೋಸ ಮಾಡುತ್ತಿದೆ ಮುಸ್ಲಿಮ್ ರನ್ನು ಬಡವರನ್ನಾಗಿ ಇಡುತ್ತಿದೆ ಮುಸ್ಲಿಂ ಮೀಸಲಾತಿ ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಬಿಜೆಪಿ ಪಕ್ಷಕ್ಕೆ ಗುಜರಾತ್ ಉತ್ತರ ಪ್ರದೇಶದಲ್ಲಿ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ ರು ಬೆಂಬಲಿಸಿದ್ದಾರೆ ಅಂತತೇ ದೇಶದೆಲ್ಲಡೆ ಬಿಜೆಪಿ ಗೆ ಬೆಂಬಲ ಸಿಗಲಿದೆ ಕಾಂಗ್ರೆಸ್ ಪಕ್ಷದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಈ ವೇಳೆ ಬಿಜೆಪಿ ಪಕ್ಷದ ಮುಖಂಡರಾದ ಹೇಮರೆಡ್ಡಿ ಮೇಟಿ, ಮಲಕೇಂದ್ರಗೌಡ ಪಾಟೀಲ್, ಎಂ ಎಸ್ ಪಾಟೀಲ್, ಗಂಗಾಧರಾವ್ ನಾಡಗೌಡ, ಕೆಂಚಪ್ಪ ಬಿರಾದಾರ, ಸಂಗಮ್ಮ ದೇವರಳ್ಳಿ,ರವೀಂದ್ರ ಲೋಣಿ,ರಮೇಶ ಬಿದನೂರ, ಸುರೇಶ ಬಿರಾದಾರ ,ಜಗದೀಶ್ ಪಂಪಣ್ಣನವರ ಮಾತನಾಡಿದರು
ಸಮಾರಂಭದಲ್ಲಿ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾಂಗ್ರೆಸ್ ಸರಕಾರ ವೂಟ್ ಬ್ಯಾಂಕ್ ಗೆ ಮುಸ್ಲಿಂ ಮೀಸಲಾತಿ ನೀಡಲು 2500 ಕೋಟಿ ರೂ ಮುಸ್ಲಿಂ ಶಾದಿ ಭಾಗ್ಯಕ್ಕೆ ಮೀಸಲಿಟ್ಟಿದೆ ಈ ಭಾಗ್ಯ ಮುಸ್ಲಿಮ್ ರಿಗೆ ಮಾತ್ರ ಹಿಂದೂಗಳಿಗೆ ಇಲ್ಲ ಯಾಕೆ ಹಿಂದೂಗಳಲ್ಲಿ ಬಡವರು ಇಲ್ವಾ? ಪ್ರಧಾನಿ ನರೇಂದ್ರ ಮೋದಿಯವರ ಇಂತಹ ದ್ವೇಷ ಮಾಡಿಲ್ಲ ಅವರ ಯೋಜನೆಗಳು ಸಮವಾಗಿ ಇರುತ್ತವೆ ಅಂಬೇಡ್ಕರ್ ಅವರು ಅಧ್ಯಯನ ಮಾಡಿದ ಸ್ಥಳಗಳನ್ನು ಪಂಚತೀರ್ಥಕ್ಷೇತ್ರ - ವನ್ನಾಗಿಸಿದ್ದಾರೆ.
ಎ ಎಸ್ ಪಾಟೀಲ (ನಡಹಳ್ಳಿ)
ಮಾಜಿ ಶಾಸಕರು ಮುದ್ದೇಬಿಹಾಳ