ಮೇ-20 ರಂದು ವಿಜಯ ನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಪಾಲ್ಗೊಳ್ಳಲು ಕರೆ
ವಿಜಯಪುರ – ೧೫: ಕಾಂಗ್ರೆಸ್ ಪಕ್ಷದ ಸರಕಾರದ ಕರ್ನಾಟಕದಲ್ಲಿ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಮುನಸಿಪಲ್ ಮೈದಾನದಲ್ಲಿ ದಿನಾಂಕ ೨೦-೦೫-೨ ೦೨೫ ರಂದು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶಕ್ಕೆ ಎ.ಐ.ಸಿ.ಸಿ. ಅಧ್ಯಕ್ಷರು, ಲೋಕಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸುತ್ತಿದ್ದು ಈ ಸಮಾವೇಶದಲ್ಲಿ ಹಟ್ಟಿ ಹಾಡಿ, ತಾಂಡಾ, ಪಾಳ್ಯ, ಮಜು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅಲ್ಲಿ ವಾಸಿಸುತ್ತಿರುವ ಸುಮಾರು ೧ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಇಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ಸ್ ಕಾರ್ಯಾಲಯದಲ್ಲಿ ವಿಜಯಪುರ ನಗರ ಮತಕ್ಷೇತ್ರದ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಧಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ರವರು ಕಾರ್ಯಕ್ರಮದ ಉಸ್ತುವಾರಿಗಳಾಗಿ ಆಗಮಿಸಿ ಮಾತನಾಡುತ್ತಾ ಶ್ರೀ ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರ ಎರಡು ವರ್ಷ ಯಶಸ್ವಿಯಾಗಿ ಸರಕಾರ ನಡೆಸಿ ಇಡೀ ಕರ್ನಾಟಕ ಜನತೆಗೆ ನುಡಿದಂತೆ ನಡೆದುಕೊಂಡಿದ್ದೇವೆ, ಐದು ಗ್ಯಾರಂಟಿ ಯೋಜನೆಗಳನ್ನು ಸತತವಾಗಿ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸಿದ್ದೇವೆ, ಇದರ ಜೊತೆ ಜೊತೆಯಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕೆಲಸಗಳ ಜೊತೆಗೆ ಶಾಂತಿ, ಸಮೃದ್ಧಿಗೆ ಒತ್ತು ನೀಡಲಾಗಿದೆ. ಇಡೀ ರಾಜ್ಯದ ಸರ್ವತೋಮುಖ ಜನರ ಹಿತ ಕಾಪಾಡಿ ಅಭಿವೃದ್ಧಿ ಪಥದ ಕಡೆಗೆ ಕೊಂಡೊಯ್ಯಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬೃಹತ್ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದ್ದು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರುಗಳು, ಹಾಗೂ ಸರಕಾರದ ಅಭಿಮಾನಿಗಳು ತಾವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶಕ್ಕೆ ಕರೆದುಕೊಂಡು ಬಂದು ಬೃಹತ್ ಸಮಾವೇಶವನ್ನು ಯಶಸ್ಸಿಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಲೋಣಿ, ಕೆ.ಪಿ.ಸಿ.ಸಿ. ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಅಬ್ದುಲ ಹಮೀದ ಮುಶರಿಫ್, ಕೆ.ಪಿ.ಸಿ.ಸಿ. ವಕ್ತಾರರಾದ ಎಸ್.ಎಂ.ಪಾಟೀಲ ಗಣಿಹಾರ, ಜಿಲ್ಲಾ ಕಾಂಗ್ರೆಸ್ ಖಜಾಂಚಿಯಾದ ವಿಜಯ ಕುಮಾರ ಘಾಟಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿಯಾದ ಶಬ್ಬೀರ ಜಹಾಗೀರದಾರ ಮುಂತಾದವರು ಮಾತನಾಡಿ ಕಾರ್ಯಕ್ರಮದ ಯಶಸ್ವಿಗೊಸ್ಕರ ನಾವೆಲ್ಲ ತಯಾರಾಗಿದ್ದು ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ದರಾದ ಚಾಂದಸಾಬ ಗಡಗಲಾವ, ಡಾ. ಗಂಗಾಧರ ಸಂಬಣ್ಣಿ, ವೈಜನಾಥ ಕರ್ಪೂರಮಠ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಆನಂದ ದೊಡ್ಡಮನಿ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಕೀಲ ಬಾಗಮಾರೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಐ.ಎಂ.ಇಂಡೀಕರ, ವಸಂತ ಹೊನಮೊಡೆ, ಜಾಕೀರ ಮುಲ್ಲಾ, ಆಶ್ಪಾಕ ಮನಗೂಳಿ, ಶರಣಪ್ಪ ಯಕ್ಕುಂಡಿ, ಅಬ್ದುಲ್ ಪೀರಾಂ ಜಮಖಂಡಿ, ಹಾಜಿಲಾಲ ದಳವಾಯಿ, ಫಯಾಜ ಕಲಾದಗಿ, ಎಂ.ಬಿ. ಮೆಂಡೆಗಾರ, ಗಂಗೂಬಾಯಿ ದೂಮಾಳೆ, ರಾಜಶ್ರೀ ಚೊಳಕೆ, ಗಂಗವ್ವ ಕಣಮೂಚನಾಳ, ಆನಂದ ಜಾಧವ, ಭಾರತಿ ಹೊಸಮನಿ, ಲಕ್ಷ್ಮಿ ಶಿವಣಗಿ, ಸಮೀಮಾ ಅಕ್ಕಲಕೋಟ, ಜಾಫರ ಸುತಾರ, ಸರಫರಾಜ ಅಗಸಬಾಳ, ಕಾಶೀಬಾಯಿ ಹಡಪದ, ಆಸ್ಮಾ ಕಾಲೇಬಾಗ, ಹಮೀದಾ ಪಟೇಲ, ಲಕ್ಷಿ ಬಳ್ಳಾರಿ, ಸವಿತಾ ಧನರಾಜ, ಅಯ್ಯಾಜ ರೋಜೆವಾಲೆ, ಹಮೀದ ಮನಗೂಳಿ, ಡಾ. ಶರಣಬಸಪ್ಪ ಚೌರ, ಪ್ರದೀಪ ಸೂರ್ಯವಂಶಿ, ಪರಸರಾಮ ಹೊಸಮನಿ, ಸಂತೋಷ ಬಾಲಗಾವಿ, ವೀರೇಶ ಕಲಾಲ, ಲಕ್ಷö್ಮಣ ಚಲವಾದಿ, ಮಹಾದೇವ ರಾವೂಜಿ, ಫಾರೂಖ ಅಜನಾಳ, ಐ.ಸಿ.ಫಠಾಣ, ಕೆ.ಎಸ್‌ಸ. ಪಾರಸೆಟ್ಟಿ, ಮಂಜುನಾಥ ನಿಡೋಣಿ, ಅಲ್ಲಾಬಕ್ಷ ಕಾಲೇಬಾಗ, ಜಿಶಾನ ಬಕ್ಷಿ, ದೀಲಿಪ ಪ್ರಭಾಕರ ಮುಂತಾದವರು ಉಪಸ್ಥಿತರಿದ್ದರು ಎಂದು ಜಿಲ್ಲಾ ಕಾಂಗೆಸ್ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ವಸಂತ ಹೊನಮೊಡೆ)
ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಸಮಿತಿ ವಿಜಯಪುರ