ರೈತ ಸಂಘದಿಂದ ಬಾಲ್ಯ ವಿವಾಹ ತಡೆಗಟ್ಟಲು ಜನಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ..ಎಲ್ಲಿ ಗೊತ್ತಾ..?
ಹನೂರು : ಕರ್ನಾಟಕ ರಾಜ್ಯ ರೈತ ಸಂಘವು ದಿನಾಂಕ 7/8/2024 ರಂದು ಸಮಯ ಬೆಳಿಗ್ಗೆ ಹತ್ತು ಘಂಟೆಗೆ ಹನೂರು ತಾಲ್ಲೂಕಿನ ಪುದುರಾಮಾಪುರದಲ್ಲಿನ ಗ್ರಾಮ ಶಾಖೆಯಲ್ಲಿ ನಮ್ಮ ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಬಾಲ್ಯವಿವಾಹ ತಡೆಗಟ್ಟುವ ಜನಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ತಾಲ್ಲೂಕು ಘಟಕವು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಜಿಲ್ಲಾ ಕಾರ್ಯಧ್ಯಕ್ಷರಾದ ಶೈಲೇಂದ್ರ ತಿಳಿಸಿದರು .
ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ನಂತರ ಮಾತನಾಡದ ಗೌಡೇಗೌಡರು ನಮ್ಮ ಸಂಘಟನೆಯು ಯಾವುದೇ ಜಾತಿಗೆ ಸಿಮೀತವಾಗಿಲ್ಲ ನಮ್ಮಲ್ಲಿನ ಶಕ್ತಿಯನ್ನು ಬಡವರ ಏಳಿಗೆಗೆ ಶ್ರಮಿಸಲು ಅನುಕೂಲ ಮಾಡಿಕೊಳ್ಳುತ್ತೇವೆ,ರೈತ ಸಂಘಟನೆ ಸದಾ ಕಾಲವು ಬಡವರ ಏಳಿಗೆಗಾಗಿ ಶ್ರಮಿಸುತ್ತಿದ್ದೇವೆ. ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಎಲ್ಲಾ ವರ್ಗದ ಜನರುಗಳು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ರಕ್ತ ದಾನ ಮಾಡುವ ದಾನಿಗಳು ಮೂರು ದಿನಗಳ ಮುಂಚಿತವಾಗಿ ಅಮ್ಜದ್ ಖಾನ್ ಮೊಬೈಲ್ ಸಂಖೆ 9845123128, ಭಾಸ್ಕರ್ ಸಿ ಮೊಬೈಲ್ ಸಂಖೆ 8660461532 ಇವರನ್ನು ಸಂಪರ್ಕಿಸಿ. ಕಾರ್ಯಕ್ರಮಕ್ಕೆ
ಪತ್ರಕರ್ತರು ಆಗಮಿಸಿ ತಮ್ಮ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಬೇಕಾಗಿದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಸಿ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಅಮ್ಜಾದ್ ಖಾನ್ , ಪುದುರಾಮಪುರದ ಅಧ್ಯಕ್ಷ ರಾದ ವೇಲುಸ್ವಾಮಿ ,ಗೌರವ ಅಧ್ಯಕ್ಷರು ರಾಜಣ್ಣ , ತಾಲ್ಲೂಕು ಉಪಾಧ್ಯಕ್ಷ ಪಳನಿಸ್ವಾಮಿ ಬಸವರಾಜು ಕಾಂಚಳ್ಳಿ , ಸೇರಿದಂತೆ ಇನ್ನಿತರರು ಹಾಜರಿದ್ದರು .
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ