ಚಡಚಣ : 395ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅದ್ಧೂರಿಯಾಗಿ ಚಡಚಣ ಪಟ್ಟಣದಲ್ಲಿ ಆಚರಣೆ ಮಾಡಲಾಯಿತು. ಇನ್ನು ಸಮಾರಂಭವನ್ನು ಮುಖ್ಯ ಅತಿಥಿ ಷಡಕ್ಷರಿ ಶ್ರೀಗಳು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಮಾತಾನಾಡಿದ ಅವರು, ಮಹಾರಾಷ್ಟ್ರದ ಗಡಿಭಾಗದಲ್ಲಿ ಇಂತಹ ಅದ್ದೂರಿಯಾಗಿ, ಪರಿಣಾಮಕಾರಿಯಾಗಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತೊತ್ಸವ ಆಯೋಜನೆ ಮಾಡಿದ್ದು ಒಳ್ಳೆಯ ಸಂದೇಶ. ಆದರೆ ಈ ಕಾರ್ಯಕ್ರಮ ಯಶಸ್ಸು ಪಡೆಯಬೇಕೆಂದರೆ, ಮುಖ್ಯವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಬೆಳೆದ ಬಂದ ದಾರಿ, ತತ್ವ,ಆದರ್ಶ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿ ಕೊಂಡರೆ ಯುವಕರ ಜೀವನ ಸಫಲವಾದಂತೆ ಎಂದು ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ನಮ್ಮ ದೇಶಕ್ಕೆ ಅಪಾರವಾಗಿದೆ. ಯುವಕರು ಸಂಘಟಿತರಾಗಬೇಕು, ಛತ್ರಪತಿ ಶಿವಾಜಿ ಮಹಾರಾಜರ ತತ್ವ ಸಿದ್ದಾಂತ ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಗಲಕೋಟ್ ಲೋಕಾಯುಕ್ತ ಸಿಪಿಐ ಮಹೇಂದ್ರಕುಮಾರ್ ನಾಯಕ್ ಅವರು ಮೂರ್ತಿ ಪೂಜೆ ಸಲ್ಲಿಸಿ ಮಾತಾನಾಡಿದ ಅವರು, ಹಿಂದೂ ಧರ್ಮಕ್ಕೆ ಘಟ್ಟಿ ಅಡಿಪಾಯ ಹಾಕಿಕೊಟ್ಟವರೆ ಛತ್ರಪತಿ ಶಿವಾಜಿ ಮಹಾರಾಜ್, ಇಂತಹ ಮಹಾನ್ ಹೋರಾಟಗಾರರ ಜಯಂತಿ ಆಚರಣೆ ಮಾಡಿ, ಕೆಟ್ಟ ಹವ್ಯಾಸಿಗಳಿಗೆ ಅಂಟಿಕೊಂಡಿರೆ ಈ ಕಾರ್ಯಕ್ರಮ ವ್ಯರ್ಥ ಆಗುತ್ತೆ ಎಂದು ಹೇಳಿದರು. ಸದೃಡ ಸಮಾಜಕ್ಕೆ ಒಳ್ಳೆಯ ಆದರ್ಶ ತತ್ವಗಳನ್ನು ಅಡಿವಡಿಸಿಕೊಳ್ಳಿ ನಿಮಗೂ ನಿಮ್ಮ ಕುಟುಂಬಕ್ಕೂ ನಿಮ್ಮೂರಿಗೆ ಒಳ್ಳೆಯ ಕಿರ್ತಿ ತರುವಂತ ಕಾರ್ಯ ಮಾಡಿ ಎಂದು ಕಿವಿ ಮಾತು ಹೇಳಿದರು.
ಇದಕ್ಕೂ ಮೊದಲು ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿಶೇಷವಾಗಿ ಡೊಳ್ಳುಕುಣಿತ ಹಾಗೂ ರೋಮಾಂಚಕ ಡಾಲ್ಬಿ,ಡಿಜೆ ಸೌಂಡ್‌ಗೆ ಯುವಕರು, ಸ್ಥಳೀಯರು ಕುಣಿದು ಕುಪ್ಪಳಿಸದರು. ಸುಮಾರು ಐದು ಸಾವಿರ ಅಭಿಮಾನಿ ಸಂಖ್ಯೆ ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ವಕ್ತಾರ ಗೀತಾ ಬಡಿಗೇರ ಮುಖಂಡ ಕಾಂತುಗೌಡ ಪಾಟೀಲ್, ಪ.ಪಂ ಸದಸ್ಯ ನಾಗರಾಜ್ ನಿರಾಳ, ಪ.ಪಂ ಸದಸ್ಯ ಮಲ್ಲು ಧೋತ್ರೆ ಮತ್ತು ಗ್ರಾ.ಪಂ ಮಾಜಿ ಸದಸ್ಯ ಚಂದು ಸಿಂದೆ , ಶಿವ ಸಾಹುಕಾರ್ ಖವೆಕರ, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಯುವಕ ಮಿತ್ರರು ಮಂಡಳಿ ಅಧ್ಯಕ್ಷ ಸುನೀಲ್ ಕ್ಷತ್ರಿ, ಉಪಾಧ್ಯಕ್ಷ ಚೇತನ್ ಮಠ, ರವಿ ಸಿಂದೆ, ಸಚಿನ್ ವಾಲಿ, ಸಾಗರ ಸಿಂದೆ, ಮರಾಠ ಸಮಾಜದ ಅಧ್ಯಕ್ಷ ಅಂಬಾದಾಸ್ ಸಿಂಧಗಿ, ಕರವೇ ಅಧ್ಯಕ್ಷ ಸುನೀಲ್ ಕ್ಷತ್ರಿ, ಪ್ರಮೋದ್ ಮಠ, ಪ್ರವೀಣ್ ಪಾಟೀಲ, ಬಿಜೆಪಿ ಮುಖಂಡರು ಮಹೇಶ್ ಸಿಂದೆ, ಹಣಮಂತ ಕ್ಷತ್ರಿ ಇನ್ನೂ ಅನೇಕರು ಉಪಸ್ಥಿತರು.
ಪ್ರಕಾಶ್ ಕ್ಷತ್ರಿ, ದತ್ತು ಶಿಂದೆ, ರಾಜು ಕ್ಷತ್ರಿ, ಅಪ್ಪರಾವ ಸಿಂದೆ ಸ್ಥಳೀಯರು ಉಪಸ್ಥಿತರಿದ್ದರು.