ಪಿಸಿಟಿ ಶಿಕ್ಷಕರ ಬೃಹತ್ ಹೋರಾಟದಲ್ಲಿ ಪಾಲ್ಗೊಳ್ಳಲು ಕರೆ..!
ಇಂಡಿ : ಮತ್ತೊಂದು ಹೋರಾಟಕ್ಕೆ ಸಿದ್ದಗೊಳ್ಳಬೇಕಾಗಿದೆ. ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಬಡ್ತಿಯಲ್ಲಿನ ಅನ್ಯಾಯದ ವಿರುದ್ಧ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅಗಸ್ಟ್ 12 ರಂದು ಬೃಹತ್ ನಡೆಯಲಿದೆ. ಆ ಕಾರಣದಿಂದ ತಾಲ್ಲೂಕಿನ ಶಿಕ್ಷಕರು ಪಾಲ್ಗೊಳ್ಳಲು ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಈ ಸಭೆಯ ನೇತೃತ್ವ ವಹಿಸಿರುವ ಪಿ ಜಿ ಕಲ್ಮನಿ ಕರೆ ನೀಡಿ ಹೇಳಿದರು.
ಬುಧವಾರ ಪಟ್ಟಣದ ಗುರುಭವನದಲ್ಲಿ ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟನೆ ರೂಪುರೇಷೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
2017 ರಲ್ಲಿ ಜಾರಿಗೆ ಬಂದ ಹೊಸ ಸಿ & ನಿಯಮ 20-30 ವರ್ಷಗಳಿಂದ 1-7/8 ಕ್ಕೆ ಪಾಠ ಮಾಡಿ ಬೇಕೆಂದಾಗ ಪಾಠ ಮಾಡಿಸಿಕೊಂಡು ಬೇಡವಾದಾಗ ಹಿಂಬಡ್ತಿ ನೀಡುವುದು ಯಾವ ನ್ಯಾಯ..? ನಾವು ಅನುಭವಿಸುತ್ತಿರುವ ನೋವು ನಮ್ಮ ಗೊಳಿಗೆ ಮುಕ್ತಿ ನೀಡಲು ಪ್ರತಿಭಟನೆ ಇಳಿಯಲೆಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕು ವಾಯ್ ಟಿ ಪಾಟೀಲ, ಮಾಜಿ ಅಧ್ಯಕ್ಷ ಎಸ್ ವಿ ಹರಳಯ್ಯ, ಅಲ್ತಾಪ್ ಬೋರಾಮಣಿ, ಎಂ ಎಂ ನೇದಲಗಿ, ಬಿ ಎಂ ವಠಾರ, ಪಿ ಜಿ ಕಲ್ಮನಿ, ಆನಂದ ಕೆಂಭಾವಿ, ಆನಂದ ವಾಲಿಕಾರ ಮಾತನಾಡಿ ಹೋರಾಟದ ಕುರಿತು ತಮ್ಮ ಸಲಹೆ ಸೂಚನೆ ನೀಡಿದರು.
ಅಗಸ್ಟ್ 1 ರಿಂದ 3 ರ ವರೆಗೆ, ಶಿಕ್ಷಕರ 6 ತಂಡಗಳು ರಚಿಸಿ, ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯದ ಕುರಿತು ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಮನವರಿಕೆ ಮಾಡುವುದಾಗಿದೆ. ಅಗಸ್ಟ್ 5 ರಂದು ಹೋರಾಟದ ಕುರಿತು ಕ್ಷೇತ್ರ ಶಿಕ್ಷಣ ಅಧಿಕಾರಿ, ತಹಶಿಲ್ದಾರ, ಕಂದಾಯ ಉಪವಿಭಾಗ ಅಧಿಕಾರಿ ಹಾಗೂ ಶಾಸಕರಿಗೆ ಚಳುವಳಿ ಸೂಚನಾ ಪತ್ರ ಹಾಗೂ ಮನವಿ ಪತ್ರ ಬೃಹತ್ ಕಾಲ್ನಡಿಗೆ ಮೂಲಕ ಸಲ್ಲಿಸುವುದಾಗಿದೆ. ಅದಲ್ಲದೆ ಅಗಸ್ಟ್ 12 ರಂದು ಫ್ರೀಡಂ ಪಾರ್ಕನಲ್ಲಿರುವ ಬೃಹತ್ ಪ್ರತಿಭಟನೆ ಸ್ಪಂದಿಸಿದಿದ್ದರೆ, ಅಗಸ್ಟ್ 17 ರಂದು ತರಗತಿ ಬಹಿಷ್ಕಾರದಂತಹ ದಿಟ್ಟ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ಜೆ ಹೆಚ್ ತೆಲುಗು,ಸರೋಜಿನಿ ಮಾವಿನಮರ, ರಜಿಯಾ ಬೇಗಂ ಚಪ್ಪರಬಂದ
ಇನ್ನೂ ಸುಮಾರು ನೂರಕ್ಕೂ ಹೆಚ್ಚಿನ ಶಿಕ್ಷಕರು ಉಪಸ್ಥಿತರಿದ್ದರು.