ಕರುಗಳಿಗೆ ಕಂದು ರೋಗ ಲಸಿಕಾಅಭಿಯಾನ
ಇಂಡಿ : ಪಟ್ಟಣದ ಪಶು ಆರೋಗ್ಯ ಸೇರಿದಂತೆ ತಾಲೂಕಿನ ಪಶು ಚಿಕಿತ್ಸಾಲಯಗಳಲ್ಲಿ ಆಕಳಿನ ಹೆಣ್ಣು ಮತ್ತು ಎಮ್ಮೆಯ ಕರುಗಳಿಗೆ ಕಂದು ರೋಗ ಚಿಕಿತ್ಸೆ ನೀಡಲಾಯಿತು.
ತಾಲೂಕಿನಲ್ಲಿ ಅಂದಾಜು ೨೦೦೦ ಕರುಗಳಿದ್ದು ತಾಲೂಕಿನಾದ್ಯಂತ ಜುಲೈ ೩೧ ರ ವೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಂದು ರೋಗ ಅಥವಾ ಬ್ರುಸೆಲ್ಲೋಸಿಸ್ ಜಾನುವಾರುಗಳಲ್ಲಿ ಕಾಣ ಸಿಕೊಳ್ಳುವ ಒಂದು ರೋಗ . ಈ ಕುರಿತು ಬ್ರುಸೆಲ್ಲಾ ಅಬೋಟರ್ಸಸ್ ಎಂಬ ರೋಗಾಣುವಿನಿಂದ ಬರುತ್ತದೆ.
ಈ ರೋಗ ಬರದಂತೆ ತಡೆಗಟ್ಟುವದು ಅತ್ಯಂತ ಉಪಯುಕ್ತವಿಧಾನ ಲಸಿಕಾ ಪ್ರಯೋಗ ಅತಿ ಮುಖ್ಯವಾದ ಮಾರ್ಗ, ಬ್ರುಸಿಲ್ಲಾ ಅಬೋಟೈಸ್ ಪ್ರಬೇಧ ೧೯ ಜೀವಂತ ರೋಗಾಣು ಹೊಂದಿದ ಲಸಿಕೆಯನ್ನು ನಾಲ್ಕು ಮತ್ತು ಎಂಟು ತಿಂಗಳ ಕರುವಿಗೆ ನೀಡಿದರೆ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಡಾ. ರಾಜಕುಮಾರ ಅಡಕಿ ಮಾಹಿತಿ ನೀಡಿದರು.
ಲಸಿಕಾ ಅಭಿಯಾನ ದಲ್ಲಿ ಡಾ. ರಾಜಕುಮಾರ ಅಡಕಿ, ಜಾವೇದ ಬಾಗವಾನ , ರಾಮಣ್ಣ ಉಪ್ಪಾರ , ರಮೇಶ ನರಳೆ, ವಿಶ್ವನಾಥ ಮೋಕಲಾಜಿ, ಬಸವರಾಜ ಮುಂಜಿ ಮತ್ತಿತರಿದ್ದರು.
ಪಟ್ಟಣದ ಸಾತಪುರ ಗ್ರಾಮದ ಹೊಲದಲ್ಲಿ ಲಸಿಕೆ ಡಾ.ರಾಜಕುಮಾರ ಅಡಿಕೆ ಮತ್ತು ಸಿಬ್ಬಂದಿ ಪಾಲ್ಗೊಂಡಿರುವದು



















