ಇಂಡಿ : ಸತ್ಯ ಮೇವ ಜಯತೆ ಎಂಬ ವಾಕ್ಯದಲ್ಲಿಯೇ ಈ ದೇಶದ ಮಹಾನ್ ದೊರೆ ರಾಣಾ ಪ್ರತಾಪ್ ಹೋರಾಡಿ ಯುಗ ಪುರುಷನಾಗಿ ಮೆರದ ಆತನ ಆದರ್ಶಗಳು ಇಂದಿಗೂ ಸರ್ವಕಾಲಿಕ ಪ್ರಪಂಚದ ಸತ್ಯವಾಗಿದೆ ಎಂದು ದಶರಥ ಕೋರಿ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಪುರಸಭೆಯ ಮುಂಭಾಗದಲ್ಲಿರುವ ರಾಣಾ ಪ್ರತಾಪ್ ವೃತ್ತದಲ್ಲಿ ನಡೆದ 484 ನೇ ಜಯಂತಿ ಅಂಗವಾಗಿ ದಶರಥ ಕೋರಿಯವರು ಮಾತಾನಾಡಿದರು.೧೬ ನೇ ಶತಮಾನದಲ್ಲಿ ಉತ್ತರ ಭಾರತವು ಮೊಗಲ್ ದೊರೆ ಅಕ್ಬರನ ಆಡಳಿತಕ್ಕೆ ಒಳಪಟ್ಟಿತು.
ಈ ಸಂಕ್ರಮಣದ ಸಂದರ್ಭದಲ್ಲಿ ಕುಂಬಲಗಡದಲ್ಲಿ ರಾಣಾ ಪ್ರತಾಪ್‌ನೆಂಬ ಯುಗಪುರುಷ, ಧರ್ಮವೀರ ಜನನ ತಾಳಿದ್ದ.ಅಕ್ಬರ್‌ನ ಅನೇಕ ರೀತಿಯ ದೌರ್ಜನ್ಯಗಳಿಗೆ ಮಣಿಯದೇ ರಜಪೂತ ದೊರೆ ಹಲ್ದಿ ಘಾಟಯುದ್ಧದಲ್ಲಿ ಎದುರಾಳಿಗಳಿಗೆ ಸಿಂಹಸಪ್ನವಾಗಿ ಕದನ ಕಲಿಯಾಗಿ ಹೋರಾಡಿದ.
ಒಮ್ಮೆ ಅಕ್ಬರ ಮಂತ್ರಿ ಮಾನಸಿಂಗನ ಮೇಲೆ ಬಿಲ್ ಆದಿವಾಸಿ ವೀರರು ದಾಳಿ ಮಾಡಿದಾಗ ಮಾನಸಿಂಗನಿಗೆ ಪ್ರಾಣ ಬಿಕ್ಷೆ ನಿಡುವಂತೆ ತನ್ನ ಬಿಲ್ಲ್ ಸರದಾರರಿಗೆ ತಿಳಿಸುತ್ತಾನೆ.ಇದು ಆತನ ಧರ್ಮದಿಂದ ಮಾಡುವ ಯುದ್ದಕ್ಕೆ ಉದಾಹರಣೆಗೆ ಯಾಗಿದೆ ಎಂದು ಹೇಳಿದರು. ಅದೇ ರೀತಿ ಅಕ್ಬರ್ ನ ಸರದಾರ ರಹಿಂಖಾನ್ ತನ್ನ ಮೊಗಲರ ನೂರಾರು ಹೆಣ್ಣು ಮಕ್ಕೊಳಂದಿಗೆ ಸಾಗುವಾಗ ಅವರ ಮೇಲೆ ಮುಗಿಬಿದ್ದ ರಜಪೂತ ಸೈನಿಕರಿಗೆ ಹೆಣ್ಣು ಮಕ್ಕಳಿಗೆ ತೊಂದರೆ ನೀಡದಂತೆ ಆದೇಶಿಸುತ್ತಾನೆ.ಈ ಕ್ಷಾತ್ರ ವೀರ, ಧರ್ಮವೀರ ಪ್ರತಾಪ್ ನ ಔದಾರ್ಯ ಕಂಡು ರಹಿಮಖಾನ್ ಕೊನೆಯವರೆಗೂ ರಾಣಾ ಪ್ರತಾಪ್ ವಿರುದ್ಧ ಯುದ್ದ ಮಾಡಲು ಅಕ್ಬರನ ಆದೇಶ ನಿರಾಕರಿಸುತ್ತಾನೆ.
ರೈತಮೂರ್ಚ ಜಿಲ್ಲಾದ್ಯಕ್ಷ ಕಾಸುಗೌಡ ಬಿರಾದಾರ ಮಾತಾನಾಡಿದ ಅವರು, ಇತನ ವೀರತ್ವಗುಣಕ್ಕೆ ಕಳಸಪ್ರಾಯವಾದ ಸಂಗತಿ ಎಂದರೆ ಇತ ಎದುರಾಳಿಯ ಕೈ ಯಿಂದ ಖಡ್ಗ ಜಾರಿ ಬಿದ್ದಾಗ ತನ್ನಲ್ಲಿರುವ ಎರಡು ಖಡ್ಗಗಳ ಪೈಕಿ ಒಂದು ಖಡ್ಗವನ್ನು ವೈರಿಗೆ ನೀಡಿ ಸಂಪೂರ್ಣ ಭಾರತೀಯ ಸಂಸ್ಕೃತಿ ಧರ್ಮದ ನೆಲೆಗಟ್ಟಿನಲ್ಲಿ ಯುದ್ದ ಮಾಡುತ್ತಿದ್ದನು.ಈ ದೇಶದ ಹಿಂದೂತ್ವದ ರಕ್ಷಕ ಶಿವಾಜಿಯಂತೆ ಹೋರಾಡಿ ವೀರತ್ವದ ಮೈಲುಗಲ್ಲನ್ನು ಸ್ಥಾಪಿಸಿದ ರಾಣ ಪ್ರತಾಪರ ಶೌರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಣಾ ಪ್ರತಾಪ್ ರಂತಹ ಮತ್ತು ಛತ್ರಪತಿ ಶಿವಾಜಿ ಅಂತಹವರ ದರ್ಮಾಭೀಮಾನವನ್ನು ಇಂದಿನ ಯುವಕರು ಅಳವಡಿಸಿಕೊಂಡರೆ ನಮ್ಮ ವಿಶ್ವಗುರುವಾಗಲು ಶತಃ ಸಿದ್ದ ಎಂದು ಮಾತಾನಾಡಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ಹದರಿ, ರಾಮಸಿಂಗ ಕನ್ನೊಳ್ಳಿ, ಸಂಜೀವ ರಾಠೋಡ, ಅನೀಲಗೌಡ ಬಿರಾದಾರ ಸಂಜು ದಶವಂತ, ಭೀಮಾಶಂಕರ ಮೂರಮನ, ಧರ್ಮರಾಜ ವಾಲಿಕಾರ, ಸತೀಶ ಕುಂಬಾರ, ಅರವಿಂದ ರಾಠೋಡ, ಸೊಮು ನಿಂಬರಗಿಮಠ, ಶಾಂತು ಕಂಬಾರ, ಮಲ್ಲು ಗುಡ್ಲ, ಅಪ್ಪು ಮಾನೆ, ರಾಜಗುರು, ಶ್ರೀಧರ ಕ್ಷತ್ರಿ, ಶಂಕರ್ ಹಲವಾಯಿ ಇನ್ನೂ ಅನೇಕ ಯುವಕ ಮುಖಂಡರು ಉಪಸ್ಥಿತರು.