ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ರಕ್ತದಾನ ಶಿಬಿರ
ವರದಿ:ಚೇತನ್ ಕುಮಾರ್ ಎಲ್ ,ಚಾಮರಾಜನಗರ
ಹನೂರು :ತಾಲೂಕಿನ ಪುದುರಾಪುರ ಗ್ರಾಮದಲ್ಲಿ ಎರಡನೇ ವರ್ಷದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಅಧಿಕಾರಿ ಡಾ ಚಿದಂಬರಂ ಚಾಲನೆಯನ್ನು ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆ ವತಿಯಿಂದ ಎರಡನೇ ವರ್ಷದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಕುರಿತು ಮಾತನಾಡಿದ ಆರೋಗ್ಯ ಅಧಿಕಾರಿ ಡಾ ಚಿದಂಬರಂ ರೈತರು ಕೃಷಿ ಮಾಡುವುದರ ಜೊತೆಗೆ ರಕ್ತದಾನವನ್ನು ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಒಂದು ಬಾಟಲ್ ರಕ್ತದಿಂದ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುತ್ತದೆ. ಇಂತಹ ಕಾರ್ಯಕ್ರಮವನ್ನು ರೈತರು ಸ್ವಯಂ ಪ್ರೇರಣೆಯಿಂದ ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಈ ಕಾರ್ಯಕ್ರಮದಲ್ಲಿ 23 ರೈತರು ರಕ್ತದಾನವನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಮಹೇಶ್ ಕುಮಾರ್, ಜಿಲ್ಲಾ ಸಮಿತಿಯಿಂದ ಉಪಾಧ್ಯಕ್ಷ ಗೌಡೇ ಗೌಡ ಹಾಗೂ ಜಿಲ್ಲಾ ಕಾರ್ಯದರ್ಶಿ ಮಹದೇವ ಪ್ರಸಾದ್, ಲೋಕೇಶ್ , ತಾಲೂಕು ಅಧ್ಯಕ್ಷ ಅಮ್ಜದ್ ಖಾನ್, ಮಹಿಳಾ ತಾಲೂಕು ಅಧ್ಯಕ್ಷ ರಾಜಮಣಿ, ಪಳನಿ ಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.