ಇಂಡಿ : ಆಲಮೇಲ ವಸತಿ ಕುಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಶರ ತಾಯಿ ಮತ್ತು ಹುಚ್ಚಲಿಂಗೇಶ್ವರ ಜಾತ್ರಾ ನಿಮಿತ್ಯ ಮಿರಗಿ ಗ್ರಾಮದ ಆಲಮೇಲ್ ಅಡವಿ ವಸತಿ ಜನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ವಿವಿಧ ಆರೋಗ್ಯದ ಬಗ್ಗೆ ವೈದ್ಯರು ತಪಾಸಣೆ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ ಪ್ರಶಾಂತ ದೂಮಗೊಂಡ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ತಾಲೂಕ ಸಾರ್ವಜನಿಕ ಆಸ್ಪತ್ರೆ ಎನ್ ಸಿಡಿ ಘಟಕದ ಡಾ. ಪ್ರವೀಣ್ ಹಾಗೂ ತಂಡ ಜಿಲ್ಲಾ ರಕ್ತ ನಿಧಿ ಘಟಕ ಜಿಲ್ಲಾ ಸರ್ಕಾರಿ ಆಸ್ಪತ್ರೆ ವಿಜಯಪುರ ಡಾ. ಶಿವಕುಮಾರ್ ಜಂಗಮಶೆಟ್ಟಿ ಹಾಗೂ ತಂಡ, ಶ್ರೀ ನಾಗಲಿಂಗ ಅಜ್ಜನವರು ಹಾಗೂ ಹನ್ನೊಂದು ದಿನಗಳ ಕಾಲ ತಪಸ್ವಿ ಮಾತಾ ನೀಲಮ್ಮತಾಯಿ
ಮಾಜಿ ತಾಪಂ ಸ ಹಾಲಿ ಗ್ರಾಮ ಪಂಚಾಯತ್ ಸದಸ್ಯರು ಶ್ರೀಮಂತ ಕಸ್ಕಿ. ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಬೋರಮ್ಮ ಶ್ರೀಶೈಲ್ ಕಸ್ಕಿ, ಸಿದ್ರು, ಆರೋಗ್ಯ ಇಲಾಖೆಯ ಪತ್ತಾರ್, ಪೂಜಾರ್,ಬಿರಾದಾರ್, ಮಹಾಂತೇಶ್, ಶೇಕ್, ಕಲ್ಪನಾ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಜಾತ್ರಾ ಕಮಿಟಿ ಪದಾಧಿಕಾರಿಗಳು ಸಕಲ ಭಕ್ತರು ಪಾಲ್ಗೊಂಡಿದ್ದರು.