ಇಂಡಿ : ರಸ್ತೆ ಮಧ್ಯದಲ್ಲಿದ್ದ ತಗ್ಗು ಗುಂಡಿಯಲ್ಲಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ರೈಲ್ವೆ ಸ್ಟೇಷನ್ ಹಾಗೂ ಅಹಿರಸಂಗ ರಸ್ತೆಯಲ್ಲಿ ನಡೆದಿದೆ. ಈರಯ್ಯ ಮಲ್ಲಯ್ಯ ಮಠಪತಿ ಮೃತಪಟ್ಟಿರುವ ದುರ್ದೈವಿ. ಇನ್ನು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ರಸ್ತೆಯ ಮಧ್ಯದಲ್ಲಿದ್ದ ತಗ್ಗು ಗುಂಡಿಯಲ್ಲಿ ಬಿದ್ದು ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಅಲ್ಲದೇ, ಈರಯ್ಯಯವರು ಶ್ರೀ ದಾನಮ್ಮ ಗುಡಿ ಸ್ವಾಮಿ ಆಗಿದ್ದರು. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.