ಕೃಷಿ ಜಮೀನು ಪಹಣಿಗೆ ಆಧಾರ ಜೋಡಣೆ ಕಡ್ಡಾಯ : ಎಸಿ ಅಬೀದ್ ಗದ್ಯಾಳ
ಇಂಡಿ : ಕೃಷಿಕರಿಗೆ ಸರಕಾರದ ಯೋಜನೆಗಳು ತಲುಪಿಸುವ ನಿಟ್ಟಿನಲ್ಲಿ ಕೃಷಿ ಜಮೀನುಗಳಿಗೆ ಆಧಾರ ಜೋಡಣೆ ಕಡ್ಡಾಯವಾಗಿರುತ್ತದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.
ಗ್ರಾಮ ಆಡಳಿತ ಕಚೇರಿಯಲ್ಲಿ ಆಧಾರ ಸಿಂಡೀಗ್ ಕಾರ್ಯ ನಡೆಯುತ್ತಿದೆ. ರೈತರು ತಮ್ಮ ತಮ್ಮ ಆಧಾರ ಕಾರ್ಡು ಪಹಣ ಪತ್ರ, ಮತ್ತು ಆಧಾರ ಲಿಂಕ ಆಗಿರುವ ಮೊಬೈಲ್ ಗಳ ಜೊತೆಗೆ ಕೊಡಲೇ ಸಂಬAಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವದು ಮತ್ತು ಜಂಟಿ ಖಾತೆ ಹೊಂದಿದಲ್ಲಿ ಎಲ್ಲಾ ಖಾತಾದಾರರ ಆಧಾರ ಕಾರ್ಡನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗುವದು ಅಗತ್ಯ ವಾಗಿರುತ್ತದೆ.
ಇಂಡಿ ಉಪವಿಭಾಗದಲ್ಲಿ ಪಹಣ ಗೆ ಆಧಾರ ಜೋಡಿಸುವ ಕಾರ್ಯಕ್ಕೆ ಸಂಬAಧಪಟ್ಟAತೆ ಒಂದು ವಾರದ ಅಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಶೇ ೧೦೦ ರಷ್ಟು ಪ್ರಗತಿ ಸಾಧಿಸಲು ಕೈ ಜೋಡಿಸಲು ಗದ್ಯಾಳ ತಿಳಿಸಿದ್ದಾರೆ.
ಇಂಡಿ ಕಂದಾಯ ಉಪವಿಭಾಗ ಅಧಿಕಾರಿ ಅಬೀದ ಗದ್ಯಾಳ