“ಬಡಿಗೇರ” ರಂಗಭೂಮಿ ರತ್ನಸಿರಿ ಪ್ರಶಸ್ತಿಗೆ ಆಯ್ಕೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ರಂಗಭೂಮಿ, ಕಿರುತೆರೆ, ಚಲನಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ಮುದ್ದೇಬಿಹಾಳ ತಾಲೂಕಿನಲ್ಲಿ ಮಡಿಕೇಶ್ವರ ಗ್ರಾಮದ ಗುರುರಾಜ ಬಡಿಗೇರ ಅವರನ್ನು ರಾಜ್ಯಮಟ್ಟದ ರಂಗಭೂಮಿ ರತ್ನಸಿರಿ ಪ್ರಶಸ್ತಿಗೆ ತಾಳಿಕೋಟೆಯ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆಯವರು ಆಯ್ಕೆ ಮಾಡಿ ಆದೇಶವನ್ನು ನೀಡಿದ್ದಾರೆ. ಮೇ 3ರಂದು ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗುರುರಾಜ ಬಡಿಗೇರ ಅವರಿಗೆ ಪ್ರಶಸ್ತಿ ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.