ಆಟೊರಿಕ್ಷಾ ಚಾಲಕರಿಗೆ ಸಂಚಾರ ನಿಯಮ ಅರಿವು : ಪಿ.ಎಸ್.ಆಯ್ ಸಂಜಯ ತಿಪ್ಪರಡ್ಡಿ
ಮುದ್ದೇಬಿಹಾಳ : ಪ್ರತಿಯೊಬ್ಬ ಆಟೊರಿಕ್ಷಾ ಚಾಲಕರು ಚಾಲನಾ ಪರವಾನಿಗೆಗಳನ್ನು ಇಟ್ಟುಕೊಳ್ಳ ಬೇಕು, ಕುಡಿದು ವಾಹನ ಚಾಲನೆ ಮಾಡಬಾರದು ಎಂದು ಪಿಎಸ್.ಆಯ್ ಸಂಜಯ ತಿಪ್ಪರಡ್ಡಿ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಆಟೊರಿಕ್ಷಾ ಚಾಲಕರು ಮತ್ತು ಮಾಲೀಕರಿಗಾಗಿ ಏರ್ಪಡಿಸಿದ್ದ ಸಂಚಾರಿ ನಿಯಮ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ಆಟೊರಿಕ್ಷಾ ಚಾಲಕ ಕಾನೂನುಬದ್ದ ಚಾಲನಾ ಪರವಾನಿಗೆ ಹೊಂದಿರುವುದಲ್ಲದೆ ಆಟೊ ರಿಕ್ಷಾ ದಾಖಲೆ ಹಾಗೂ ವಾಹನ ವಿಮೆ, ಆರ್‌ಸಿ ಪುಸ್ತಕ ಹೊಂದುವುದಲ್ಲದೆ ವಾಹನ ಚಾಲನೆ ಮಾಡುವಾಗ ಮದ್ಯ ಪಾನ ಮಾಡಕೂಡದು, ಪ್ರಯಾಣಿಕರು ಕೇಳಿದ ಸ್ಥಳಗಳಿಗೆ ಕರೆದುಕೊಂಡು ಹೋಗಲು ನಿರಾಕರಿಸುವಂತಿಲ್ಲ, ಯಾವೋಬ್ಬ ಚಾಲಕರು ಸಮವಸ್ತ್ರ ಧರಿಸದೇ ಆಟೋ ಚಲಾವಣೆ ಮಾಡುವಂತಿಲ್ಲ, ಆಟೋರಿಕ್ಷಾದಲ್ಲಿ ಮೀಟರ ಅಳವಡಿಸಿ ಕೊಳ್ಳಬೇಕು ನಿಗಧೀತ ದರಕ್ಕಿಂತ ಜಾಸ್ತಿ ಹಣ ವಸೂಲಿ ಮಾಡದಂತೆ ಎಚ್ಚರಿಸಿದರು, ಮಹಿಳಾ ಪ್ರಯಾಣಿಕರ ಜೋತೆ ದುರ್ನಡತೆ ತೋರಬಾರದು, ಪಟ್ಟಣದಲ್ಲಿ ಆಟೊರಿಕ್ಷಾ ಚಾಲಕರು ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ಪಾರ್ಕಿಂಗ್ ಮಾಡಬೇಕು, ಚಾಲರು ತಮ್ಮ ಆಟೋರಿಕ್ಷಾದಲ್ಲಿ ಮೀತಿಗಿಂತ ಹೆಚ್ಚಿನ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳನ್ನು ಹಾಕುವುದು ಕಂಡು ಬಂದರೆ ಮೂಲಾಜ ಇಲ್ಲದೇ ಕೇಸ ಹಾಕಿ ಆಟೋರಿಕ್ಷಾವನ್ನು ವಶಕ್ಕೆ ಪಡೆಯುತ್ತೇನೆ ಎಂದರು. ಒಂದು ವೇಳೆ ಅಪಾಯಕಾರಿ ಒವರಟೇಕ ಮಾಡಿದ್ದು ಕಂಡು ಬಂದರೆ ವಶಕ್ಕೆ ಪಡೆಯಲಾಗುವುದು, ಪಟ್ಟದ ಪ್ರಯಾಣಿಕರು ಕೇಳಿದ ಜಾಗಕ್ಕೆ ಕರೆದುಕೊಂಡು ಹೋಗಲು ನಿರಾಕರಿಸಿದ್ದು ಮೆಲ್ನೊಟಕ್ಕೆ ಕಂಡು ಬಂದಿದ್ದು ಇದನ್ನು ಕೈಬಿಡಬೇಕು ಚಾಲಕರು, ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸದ್ದಿದರೆ ದಂಡ ನಿಶ್ಚಿತ, ತಮ್ಮ ವಾಹನದಲ್ಲಿ ಮೀಟರ ಅಳವಡಿಸದೆ ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ವಸೂಲಿ ದಂಧೆ ನಿಲ್ಲಬೇಕು, ಎಂದು ಖಡಕವಾಗಿ ಎಚ್ಚರಿಸಿದರು.
ಕ್ರೈಮ ಪಿ.ಎಸ್.ಆಯ್ ಆರ್ ಎಲ್ ಮುನ್ನಾಬಾಯಿ ಮಾತನಾಡಿದವರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದಲ್ಲದೆ ರಸ್ತೆ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಿ. ಪ್ರತಿಯೊಬ್ಬ ಚಾಲಕರು ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ಸಿಗುವ ರಸ್ತೆ ನಿಯಮಗಳನ್ನು ಪಾಲಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಪೋಲಿಸ ಸಿಬ್ಬಂದಿಗಳಾದ ಶಾಂತಗೌಡ ಬನ್ನಟ್ಟಿ, ಮಲ್ಲು ಬೊಳರಡ್ಡಿ, ಪ್ರಭು ಉಪ್ಪಾರ, ಚಿದಾನಂದ ಸೂರಗಹಳ್ಳಿ, ರಮೇಶ ಮದರಿ, ವಿರೇಶ ಹಾಲಗಂಗಾದರಮಠ ಸೇರೆದಂತೆ, ಪಟ್ಟಣದ 100 ಕ್ಕೂ ಹೆಚ್ಚು ಆಟೊರಿಕ್ಷಾ ಚಾಲಕರು ಪಾಲ್ಗೊಂಡಿದ್ದರು.