ಇಂಡಿ : ಅಟಲಜೀ ಜನಸ್ನೇಹಿ ಡಾಟಾ ಎಂಟ್ರಿ ಆಫರೆಟರ್ ಸೇವಾ ಭದ್ರತೆಗಾಗಿ ಚುಕ್ಕೆ ಗುರುತ್ತಿಲ್ಲದೇ ಪ್ರಶ್ನೆ ಮಾಡುವ ಮೂಲಕ ನಿಂಬೆ ನಾಡಿನ ಶಾಸಕ ಯಶವಂತರಾಯಗೌಡ ಪಾಟೀಲ್ ವಿಧಾನ ಸಭೆಯಲ್ಲಿ ಸರಕಾರಕ್ಕೆ ಗಮನ ಸೆಳೆದರು. ಜಿಲ್ಲೆಯ ಅಟಲ್ ಜಿ ಜನ ಸ್ನೇಹಿ ಡಾಟಾ ಎಂಟ್ರಿ ಆಫರೆಟರ್ ಸಂಘದ ವತಿಯಿಂದ ಸೇವಾ ಭದ್ರತೆ ಮತ್ತು ಕೆಲವು ಸಮಸ್ಯೆ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ್ ಅವರಿಗೆ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಕಾರ್ಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಆಫರೆಟರ್ ಸಮಸ್ಯೆ ಆಲಿಸಿದ ಶಾಸಕರು ಇಂದು ವಿಧಾನ ಸೌಧದಲ್ಲಿ ಧ್ವನಿ ಮೊಳಗಿಸಿದ್ದಾರೆ.
ರಾಜ್ಯದಲ್ಲಿರುವ ಅಟಲ್ ಜಿ ಜನ ಸ್ನೇಹಿ ಕೇಂದ್ರಗಳ ಸಂಖ್ಯೆ ಎಷ್ಟು ? ಎಷ್ಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ ? ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಸಂಖ್ಯೆಗಳು ಎಷ್ಟು ? ಸೇವಾ ಭದ್ರತೆ ಒದಗಿಸಲು ಸರ್ಕಾರ ಕೈಗೊಂಡ ಕ್ರಮವೇನು ಮತ್ತು ಗ್ರಾಮ್ ಒನ್ ಕೇಂದ್ರೆ ತೆರೆಯುವುದರಿಂದ ಸದರಿಯವರನ್ನು ಸೇವೆಯಿಂದ ತೆಗೆಯುವ ಪ್ರಸ್ತಾವನೆ ಸರಕಾರದ ಮುಂದಿದೇಯೇ , ಇದ್ದಲ್ಲಿ ಕಾರಣಗಳೇನು ಅಂತಾ ಸರಕಾರಕ್ಕೆ ಸುಮಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಫರೆಟರ್ ಕುರಿತು ಚುಕ್ಕೆ ಗುರುತಿಲ್ಲದೇ ಪ್ರಶ್ನೆ ಮೂಲಕ ಸರಕಾರಕ್ಕೆ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮರು ಉತ್ತರಿಸಿದ ಕಂದಾಯ ಸಚಿವರು ರಾಜ್ಯದಲ್ಲಿ 769 ನಾಡ ಕಚೇರಿಗಳು, 122 ಫ್ರಂಟ್ ಆಫೀಸ್ ಗಳು ಹಾಗೂ ಜಿಲ್ಲಾ ಮಟ್ಟದಲ್ಲಿ 30 ಸ್ಪಂದನ ಕೇಂದ್ರಗಳಿವೆ. ಒಟ್ಟು 1121 ಡೇಟಾ ಎಂಟ್ರಿ ಆಫರೆಟರಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮ ಒನ್ ಕೇಂದ್ರ ತೆರೆಯುವುದರಿಂದ ಸದರಿಯವರನ್ನ ಸೇವೆಯಿಂದ ತೆಗೆಯುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ಸೇವಾ ಭದ್ರತೆ ನೀಡಲು ಅವಕಾಶವಿಲ್ಲ ಎಂದು ಹೇಳಿ ಮಾಹಿತಿ ನೀಡಿದರು.