ಮಸ್ಕಿ: ಬೇಸಿಗೆ ಸಮೀಪಿಸುತ್ತಿರುವುದರಿಂದ ಬಿಸಿಲಿನ ಶಾಖದಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಸ್ಕಿಯ ಪ್ರಕೃತಿ ಫೌಂಡೇಶನ್ನಿನ ಪದಾಧಿಕಾರಿಗಳು ತಾಲೂಕಿನಾದ್ಯಂತ ಪ್ರಾಣಿ, ಪಕ್ಷಿಗಳಿಗೆ ನೀರು ಹಾಗೂ ಆಹಾರವನ್ನು ಒದಗಿಸುವ ಅಭಿಯಾನವನ್ನು ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರಾಯಣ್ ನಗರ ಕ್ಯಾಂಪಿನ ಶಾಲಾ ಆವರಣದಲ್ಲಿ ಪ್ರತಿಯೊಂದು ಮರಕ್ಕೂ ಮಣ್ಣಿನ ಮಡಿಕೆ ಕಟ್ಟಿ ಪಕ್ಷಿಗಳಿಗೆ ನೀರು ಆಹಾರವನ್ನು ಇಟ್ಟರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಮಕ್ಕಳಿಗು ನಿಮ್ಮ ನಿಮ್ಮ ಮನೆಯ ಮೇಲೆ ಪಕ್ಷಿಗಳಿಗೆ ನೀರು ಕಾಳುಗಳನ್ನು ಇಟ್ಟು ಅವುಗಳ ರಕ್ಷಣೆ ಮಾಡಿ ಎಂದು ಮನವಿ ಮಾಡಿದರು. ಇಂತಹ ಕಾರ್ಯಕ್ಕೆ ಸಹಕರಿಸಿದ ಶಾಲೆಯ ಶಿಕ್ಷಕರಿಗೂ ಹಾಗೂ ಕ್ಯಾಂಪಿನ ಸಹೋದರರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.