ಏಡ್ಸ್, ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಶ್ರಮವಹಿಸಿ : ಪಾಟೀಲ
ಇಂಡಿ: ಏಡ್ಸ್ ಮತ್ತು ಕ್ಷಯರೋಗ ನಿರ್ಮೂಲನೆ ಮತ್ತು ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಕ್ಷಯರೋಗ ಆಪ್ತ ಸಮಾಲೋಚಕ ಬಸವರಾಜ ಪಾಟೀಲ ಹೇಳೀದರು.
ಅವರು ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟಿçÃಯ ಏಡ್ಸ್ ಮತ್ತು ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿ ಸೋಮನಿಂಗ ಬಿರಾದಾರ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ.ರಮೇಶ ಆರ್.ಎಚ್ ಮಾತನಾಡಿ ‘ ಏಡ್ಸ್ ಮತ್ತು ಕ್ಷಯರೋಗದ ಕುರಿತು ಸಮಾಜದಲ್ಲಿ ಅರಿವನ್ನು ಮೂಡಿಸಲು ಸಲಹೆ ನೀಡಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ.ರವಿಕುಮಾರ ಅರಳಿ, ಪ್ರೊ. ಸಂಗಮೇಶ ಹಿರೇಮಠ, ಶಕುಂತಲಾ ದಶವಂತ, ಸೋಮಣ್ಣ ಸಜ್ಜನ ರಾಷ್ಟಿçÃಯ ಸೇವಾ ಯೋಜನೆ ಸಂಯೋಜನಾಧಿಕಾರಿ ಪ್ರೊ.ಪಿ.ಎಸ್. ದೇವರ ಸ್ವಾಗತಿಸಿದರು. ಪ್ರೊ.ಕಿರಣ ರೇವಣಕರ ಮೊದಲಾದವರು ಉಪಸ್ಥಿತರಿದ್ದರು.
ಎನ್ ಎಸ್ ಎಸ್ ಸಂಯೋಜನಾಧಿಕಾರಿ ಪ್ರೊ.ಪಿ.ಎಸ್. ದೇವರ ಸ್ವಾಗತಿಸಿದರು. ಪ್ರೊ.ಕಿರಣ ರೇವಣಕರ ವಂದಿಸಿದರು. ಕು.ಶಿವರಾಜ ನರಳೆ ನಿರೂಪಿಸಿದರು.
ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂತರ ರಾಷ್ಟೀಯ ಏಡ್ಸ್ ಮತ್ತು ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಜರುಗಿತು.




















