ಆಗಸ್ಟ್ 3 ರಂದು ವಿಜಯಪುರ ಬಿಜೆಪಿ ರೈತ ಮೋರ್ಚಾ ನಡೇ : ಮೈಸೂರು ಕಡೇ ಉಪಾಧ್ಯಕ್ಷ ಕೆಂಗನಾಳ ಕರೆ..
ವಿಜಯಪುರ : ಭ್ರಷ್ಟ ಕಾಂಗ್ರೇಸ್ ಸರಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ 187 ಕೋಟಿ ಹಗರಣದ ವಿರುದ್ಧ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರ ಕರೆಯ ನಿಮಿತ್ಯ, ವಿಜಯಪುರ ಜಿಲ್ಲೆಯ ರೈತ ಮೋರ್ಚಾ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಅವರ ಆದೇಶದ ನಿಮಿತ್ಯ, ಜಿಲ್ಲೆಯ ಎಲ್ಲ ಮಂಡಲದ ಪದಾಧಿಕಾರಿಗಳು ಭಾಗವಹಿಸಿ. ಹಾಗೆಯೇ ಎಲ್ಲ ರೈತ ಮೋರ್ಚಾ ಸದಸ್ಯರು ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ NDA
(ಬಿಜೆಪಿ-ಜೆಡಿಎಸ್) ಮೈತ್ರಿಕೂಟದ ಜೊತೆಗೆ ದಿನಾಂಕ: 03.08.2024ರಂದು ಬೆಳಿಗ್ಗೆ 08.00ಗಂಟೆಗೆ (10.08.2024ರವರೆಗೆ) “ಮೈಸೂರು ಚಲೋ” ಪಾದಯಾತ್ರೆಯ ಉದ್ಘಾಟನೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಕೆಂಪಮ್ಮ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ತಾವುಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕೆಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.