ಬಡ್ತಿ, ಪದಪದೋನ್ನತಿಗಾಗಿ ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!
ಕರ್ನಾಟಕ ರಾಜ್ಯ ಮುಕ್ತ ವಿ ವಿ ಯಲ್ಲಿ ವಿವಿಧ ಕೋರ್ಸುಗಳಿಗೆ ಪ್ರವೇಶ ಪ್ರಾರಂಭ..!
BPL ಕಾರ್ಡ ಹೊಂದಿದ ಮಹಿಳಾ ಅಭ್ಯರ್ಥಿಗಳಿಗೆ ರಿಯಾಯಿತಿ ಅವಕಾಶ..!
ಅಫಜಲಪುರ : 2023/24 ರ ಶೈಕ್ಷಣಿಕ ವರ್ಷದ ಜುಲೈ ಆವೃತ್ತಿಯ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಪ್ರಾರಂಭವಾಗಿವೆ.
ಪ್ರಥಮ ವರ್ಷದ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ, ಬಿಎಸ್ ಡಬ್ಲ್ಯೂ, ಹಾಗೂ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಇತಿಹಾಸ, ಹಾಗೂ ಪುರಾತತ್ವ ಅಧ್ಯಯನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಷಯದ ಪ್ರಥಮ ಎಮ್ ಎ ಮತ್ತು ಎಂಕಾಂ, ಎಮ್ ಬಿ ಎ, ಎಮ್ ಎಲ್ ಐ ಎಸ್ಸಿ, ಎಂಎಸ್ಸಿ, ಎಮ್ ಎಸ್ ಡಬ್ಲ್ಯೂ, ಎಮ್ ಸಿ ಎ ಡಿಪ್ಲೊಮಾ ವಿಷಯಗಳಿಗೆ ಪ್ರವೇಶ ಪ್ರಾರಂಭವಾಗಿದ್ದು ಬಿಪಿಎಲ್ ಕಾರ್ಡ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ ಭೋದನಾ ಶುಲ್ಕದಲ್ಲಿ ಶೇ 15/ ರಷ್ಟು ರಿಯಾಯಿತಿ ನೀಡಲಾಗಿದೆ.
ದಂಡ ಶುಲ್ಕವಿಲ್ಲದೇ ಪ್ರವೇಶ ಪಡೆಯಲು ಅಗಸ್ಟ್ 31 ಕೊನೆಯ ದಿನವಾಗಿದೆ. ಇದೊಂದು ಸರಕಾರಿ ನೌಕಸ್ಥರಸ್ಥರಿಗೆ, ಬ್ಯಾಂಕ್ ಉದ್ಯೋಗಿಗಳಿಗೆ, ಪ್ರಾಥಮಿಕ, ಪ್ರೌಢಶಾಲಾ, ಪದವಿ, ಸ್ನಾತಕೋತ್ತರ, ಸ್ವದ್ಯೋಗಿಗಳಿಗೆ ಹಾಗೂ ಶಿಕ್ಷಕರಿಗೆ ಉನ್ನತ ಬಡ್ತಿ, ಪದೋನ್ನೊತಿ ಹೊಂದಲು ಸುವರ್ಣ ಅವಕಾಶ. ಅಫಜಲಪುರ ತಾಲ್ಲೂಕಿನಲ್ಲಿ ಏಕೈಕ ಅಧಿಕೃತ ಕಲಿಕಾರ್ಥಿ ಕೇಂದ್ರ ಇದ್ದು, ಹೆಚ್ಚಿನ ಮಾಹಿತಿಗಾಗಿ ಬಸವೇಶ್ವರ ಸರ್ಕಲ್, ಘತ್ತರಗಾ ರೋಡ, ಪೆಟ್ರೋಲ ಪಂಪ್ ಎದುರುಗಡೆ ಕಛೇರಿ ಬೇಟಿ ನೀಡಿ ಮಾಹಿತಿ ಪಡೆದು ಪ್ರವೇಶ ಪಡೆಯಲು ಒಳ್ಳೆಯ ಅವಕಾಶವಿದೆ. ಇನ್ನೂ ಪೋನ್ ಕರೆಯ ಮೂಲಕ ಸಂಪರ್ಕ ಮಾಡಿ ಮಾಹಿತಿ ಪಡೆಯಲು ಈ ಕೆಳಗಿನ ಸಂಖ್ಯೆಗಳಿಗೆ 8618981392, 7760660419, 9611816517 ಪೊನ್ ಕರೆ ಮಾಡಬಹುದು ಎಂದು ಪತ್ರಿಕೆ ಪ್ರಕಟಣೆಗೆ ಸಂಚಾಲಕ ಎಸ್. ಬಿ. ಜಮಾದಾರ ತಿಳಿಸಿದರು.