ಅಪಾಯದಲ್ಲಿದ್ದ ಅದೃಷ್ಟ ಪಕ್ಷಿಗೆ ಸಕಾಲದಲ್ಲಿ ನೆರವಾದ ಯುವಕ ಚಂದ್ರು
ಇಂಡಿ : ಅಪಾಯದಲ್ಲಿ ಅದೃಷ್ಟ ಪಕ್ಷಿ (ರತ್ನಪಕ್ಷಿ) ಕೆಂಬೂತ್ ಅಥವಾ ಕೋಗಿಲೆ ಪ್ರಭೇದಕ್ಕೆ ಸೇರಿದ್ದ ಪಕ್ಷಿಯನ್ನು ಯುವಕ ರಕ್ಷಿಸಿ ಮಾನವೀಯತೆ ಮೆರದಿರುವ ಘಟನೆ ತಾಲೂಕಿನ ಎಲ್ಲ ಜನತೆಗೆ ಮೆಚ್ಚುಗೆ ಪಾತ್ರರಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಮಾರ್ಗ ಮಧ್ಯದಲ್ಲಿ “ರತ್ನಪಕ್ಷಿ” ಹಳ್ಳಿಯ ಜನರು ಸಂಬಾರ ಕಾಗೆ ಉತ್ತರ ಕರ್ನಾಟಕದಲ್ಲಿ ಕುಂಬಾರ ಕಾಗೆ ಎಂದು ಕರೆಯುತ್ತಾರೆ. ಹಿಂದೂ. ಧಾರ್ಮಿಕ ಹಬ್ಬದ ಪಾಡ್ಯದ ದಿನಗಳಲ್ಲಿ ಈ ಅದೃಷ್ಟ ಪಕ್ಷಿಯನ್ನು ನೋಡಿದರೇ ವರ್ಷವಿಡಿ ಅದೃಷ್ಟದೇವತೆ ಒಲಿಯವಳು ಎನ್ನುವ ವಾಡಿಕೆಯ ಮಾತಿದೆ.
ಇಂತಹ ಅದೃಷ್ಟ ಪಕ್ಷಿಗೆ ಆಕಸ್ಮಿಕವಾಗಿ ಆಘಾತವಾಗಿ ತಲೆಗೆ ಪೆಟ್ಟು ಮಾಡಿಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವುದು ಕಂಡು ಹಿರೇಮಸಳಿ ಗ್ರಾಮದ ಯುವಕ ಚಂದು ಡೊಂಗ್ರೊಜ್ ಆ ಪಕ್ಷಿಯನ್ನು ರಕ್ಷಣೆ ಮಾಡಿ ಪ್ರಾಣ ಉಳಿಸಲು ಇನ್ನಿಲ್ಲದ ಕಸರತ್ತು ಮಾಡಿದ್ದಾನೆ.ಕೊನೆಗೆ ಅದು ಪ್ರಜ್ಞೆ ತಪ್ಪಿದ್ದು ಕಂಡು ತಡವಲಗಾ ಗ್ರಾಮಕ್ಕೆ ತೆಗೆದುಕೊಂಡು ತೆರಳಿ, ಅಲ್ಲಿ ಜೀವ ಜಲ ನೀರು ಕೂಡಿಸಿ ಶುಶ್ರೂಷೆ ಮಾಡಿ ಅದರ ತಲೆಗಾಗಿರುವ ಮಾರಣಾಂತಿಕ ಪೆಟ್ಟು ಕಂಡು ಅದರ ತಲೆಗೆ ತನಗೆ ಗೊತ್ತಿರುವ ಪ್ರಾಥಮಿಕ ಔಷಧಿ ಹಚ್ಚಿ ಪಕ್ಕದಲ್ಲಿರುವ ತೋಟಕ್ಕೆ ಬಿಟ್ಟು ಅದು ಹಾರಿ ಹೋಗುವಂತೆ ಮಾಡಿ ಮಾನವೀಯತೆಯನ್ನು ಮೆರೆದಿದ್ದಾನೆ. ಈಗ ತಾಲ್ಲೂಕಿನಾದ್ಯಾಂತ ಆ ಯುವಕ ಪ್ರಶಂಸೆಯಲ್ಲಿದ್ದಾನೆ.
ಆದರೆ ನಮ್ಮ ವೈಸ್ ಆಫ್ ಜನತಾ ಕರೆ ಏನೆಂದರೇ ಪ್ರತಿಯೊಬ್ಬರೂ ಪ್ರಾಣಿ ರಕ್ಷಗಳಿಗೆ ಕಟಿಬದ್ದರಾಗಿ ಅವುಗಳ ರಕ್ಷಣೆಗೆ ಮುಂದಾಗಿ ಮತ್ತು ಅವುಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಮಾಡಲು ಮನವಿ ಮಾಡಿಕೊಳ್ಳುತ್ತೇವೆ. ಅದಲ್ಲದೇ ಸಾರ್ವಜನಿಕರು ಈ ರೀತಿಯ ತಾವು ಮಾಡಿರುವ ಕಾರ್ಯದ ಬಗ್ಗೆ ವೈಸ್ ಆಫ್ ಜನತಾ ದಲ್ಲಿ ನಿಮ್ಮ ಶ್ಲಾಘನೀಯ ಕಾರ್ಯದ ಬಗ್ಗೆ ಪ್ರಕಟಿಸಲಾಗುವದು


















