ಶಿಕ್ಷಕರೆ ದೇವರ ಪ್ರತಿರೂಪ
ಇಂಡಿ : ಸಮಾಜದಲ್ಲಿ ಶಿಕ್ಷಕರಿಗೆ ಸಾಕಷ್ಟು ಅಭಿಮಾನದಿಂದ ಕಾಣುತ್ತಾರೆ , ಶಿಕ್ಷಕ ದೇವರ ಪ್ರತಿರೂಪ ಎಂದು ಗೌರವಿಸುತ್ತಾರೆ. ಶಿಕ್ಷಕ ಸ್ಥಾನ ಅತ್ಯಂತ ಪವಿತ್ರವಾಗಿದ್ದು ಒಳ್ಳೆಯ ಶಿಸ್ತು, ಬದ್ದತೆಯಿಂದ ಕಾಯಕದಲ್ಲಿ ತೊಡಗಬೇಕು ಎಂದು ನಾದ ಗ್ರಾಮದ ಸರಕಾರಿ ಪ್ರೌಢ ಶಾಲೆಮುಖ್ಯೋಪಾಧ್ಯಾಯ ಹಾಗೂ ಯುವಸಾಹಿತಿಸಿ.ಎಂ ಬಂಡಗಾರ ಹೇಳಿದರು.
ಬಸವೇಶ್ವರ ಪ್ರೌಢ ಶಾಲೆಯಲ್ಲಿ ನಿವೃತ್ತ ಮುಖ್ಯೊಪಾಧ್ಯಾಯರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಸವೇಶ್ವರ ಪ್ರೌಢ ಶಾಲೆಯ ಮುಖ್ಯ ಗುರುಗಳು ಜೆ.ಟಿ ಕೊಟಗೊಂಡ ಹಾಗೂ ಶಿಕ್ಷಕರಾದಿಯಾಗಿ ಈ ಸಂಸ್ಥೆಯ ಬೆಳವಣಗೆಗೆ ಸಾಕಷ್ಟು ಶ್ರಮಿಸಿದ್ದೀರಿ ಅನುಧಾನಕ್ಕಿಂತ ಪೂರ್ವ ನಿಮ್ಮ ಸೇವೆ ಸಾಕಷ್ಟು ಮಾಡಿ ಇದಕ್ಕೊಂದು ಹೊಸಸ್ಪರ್ಷ ನೀಡಿ ಈ ಸಂಸ್ಥೆಯಲ್ಲಿ ಸುಧೀರ್ಘ ದುಡಿದು ಇಂದು ನಿವೃತ್ತಿಯಾಗುತ್ತಿದ್ದೀರಿ. ಆದರೆ ಸರಕಾರ ವ್ಯವಸ್ಥೆಯಲ್ಲಿ ೬೦ ವರ್ಷದ ನಂತರ ನಿವೃತ್ತಿ ಸಹಜ, ನಿವೃತ್ತಿಯ ನಂತರ ಸಾಮಾಜಿಕ ,ಅಧ್ಯಾತ್ಮಿಕ ,ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿ ಒಳ್ಳೆಯ ಕೆಲಸ ಮಾಡಿ ಎಂದರು.
ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಅಭಿನವ ಪುಂಡಲಿಂಗ ,ಮಹಾಶಿವಯೋಗಿಗಳು, ರಾಚೋಟೇಶ್ವರ ಶಿವಾಚಾರ್ಯರು ದಿವ್ಯಸಾನಿಧ್ಯವಹಿಸಿ ಆರ್ಶೀಚನ ನೀಡಿದರು.
ಶ್ರೀಬಸವೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಎಸ್.ಆರ್ ವಿಭೂತಿ ಅಧಕ್ಷೀಯ ಮಾತಗಳಾಡಿದರು.
ಜೆಟಿ ಕೊಟಗೊಂಡ, ಶಿಕ್ಷಕ ಆರ್.ಎನ್ ರಾಠೋಡ,ಚಿತ್ರಕಲಾ ಶಿಕ್ಷಕ ಎಂ.ಬಿ ವಾರದ, ನೂತನ ಮುಖ್ಯೋಪಾಧ್ಯಾಯ ಎಸ್.ಎಂ ಖಾಜಿ, ಶಿಕ್ಷಕ ಎಸ್.ಎ ಮೇತ್ರಿ, ಕೆ.ಎಸ್ ಸನತ್, ಎಸ್.ಟಿ ಜೇವೂರ, ಮುಖ್ಯಗುರು ನಿಜಣ್ಣಾ ಕಾಳೆ, ಪ್ರಾಚಾರ್ಯ ಚಂದ್ರಶೇಖರ ದಶವಂತ, ಡಿ.ಎಸ್ ಹಿರೇಕುರಬರ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಮತ್ತಿತರಿದ್ದರು.
ಇಂಡಿಯ ಬಸವೇಶ್ವರ ಪ್ರೌಢ ಶಾಲೆ ನಿವೃತ್ತಿ ಹೊಂದಿದ ಮುಖ್ಯಗುರುಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನಿಸುತ್ತಿರುವುದು.