ಇಂಡಿ : ದೇಶದ ಭವಿಷ್ಯ ಪ್ರಜೆಗಳ ಪ್ರಜ್ಞಾವಂತಿಕೆಯಲ್ಲಿ ಅಡಗಿದೆ. ಪ್ರಜ್ಞಾವಂತಿಕೆ ಶಿಕ್ಷಣದಲ್ಲಿ ಅಡಗಿದೆ ಎಂದು ತಾಲ್ಲೂಕು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಮತ್ತು ಎಸ್ ಎಪ್ ಡಿ ಆಶ್ರಯದಲ್ಲಿ ಗ್ರಾಮ ದರ್ಶನ ಅಭಿಯಾನದ ಕಾರ್ಯಕ್ರಮದಲ್ಲಿ ಸಾರಿದರು.
ತಾಲ್ಲೂಕಿನ ಸಾತಲಗಾಂವ ಪಿ.ಐ ಗ್ರಾಮದಲ್ಲಿ ಆಯೋಜಿಸಿರುವ ಎರಡು ದಿನದ ಗ್ರಾಮ ದರ್ಶನ ಅಭಿಯಾನದ ಕಾರ್ಯಕ್ರಮದಲ್ಲಿ ದೇಶದ ಭವಿಷ್ಯ ಹಳ್ಳಿಯಲ್ಲಿ ಅಡಗಿದೆ ಎಂದು ಶಾಲೆಗೆ ಬಣ್ಣ ಬಳಿಯುವ ಮತ್ತು ಸ್ವತಂತ್ರ ಹೋರಾಟಗಾರರ ಭಾವಚಿತ್ರ ಬಿಡಿಸುವ, ಸಂಬಂಧಿಸಿದ ಅಂದ ಚೆಂದ ಚಿತ್ರಗಳನ್ನು ಬಿಡಿಸಿ ಗ್ರಾಮೀಣ ಭಾಗದ ಜನರ ಖುಷಿಗೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಮಾತಾನಾಡಿದ ಎಬಿವಿಪಿ ವಿಧ್ಯಾರ್ಥಿಗಳು ಸರಕಾರಿ ಶಾಲೆಯ ಪರಿಸ್ಥಿತಿ ಸೂಕ್ತ ನಿರ್ವಹಣೆಯಿಲ್ಲದೆ ಕೆಟ್ಟ ಪರಿಸ್ಥಿತಿಯಲ್ಲಿ ಕಾಣುತ್ತಿವೆ. ಸುಮಾರು ಶಾಲೆಗಳು ಮಳೆಯಿಂದ ಸೋರುವ ಮತ್ತು ಶೀತಲಗೊಂಡಿವೆ. ಅವುಗಳ ದುರಸ್ತಿ ಮತ್ತು ಬದಲಾವಣೆ ಮಾಡಿ ಹಳ್ಳಿಮಕ್ಕಳ ಶಿಕ್ಷಣ ಕಲಿಯಲು ಉತ್ತಮವಾದ ವಾತಾವರಣ ನಿರ್ಮಿಸಬೇಕೆಂದು ಹೇಳಿದರು.
ಶೀವು ಬರಡೋಲ, ಮಲ್ಲು ಮಾಳಿ, ಪ್ರಪುಲ್ ಕಟ್ಟೀಮನಿ, ಸಚಿನ ದಾನಗೊಂಡ, ಸಮರ್ಥ ಗಾಯಕವಾಡ, ಸೂರ್ಯ, ಗಣೇಶ, ಆಧಿತ್ಯ, ಪ್ರದೀಪ್, ಮಾಂತೇಶ ಕಂಬಾರ,
ಅಕ್ಷಯ ಯಾದವಾಡ, ಮಂಜು ಹಳ್ಳಿ, ಸಿದ್ದು ಹಾವಳಗಿ ಹಾಗೂ ಹಿರಿಯ ಕಾರ್ಯಕರ್ತ ಶ್ರೀಧರ ಕ್ಷತ್ರಿ ಉಪಸ್ಥಿತರಿದ್ದರು.