- ಪಂಡಿತರಾವ್ ಚಿದ್ರಿ ತಂಡಕ್ಕೆ ಬಾರಿ ಗೆಲುವು.
- ನಾಲ್ಕು ಸ್ಥಾನಕ್ಕೆ ತೃಪ್ತಿಪಟ್ಟ ಶರಣು ತಳ್ಳಿಕೇರಿ ಟೀಮ್.
ಬೆಂಗಳೂರು : ನ್ಯಾಯಾಲಯದ ಮೆಟ್ಟಿಲು ಹತ್ತುವ ಮೂಲಕ ತೀವ್ರ ಕುತೂಹಲ ಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಚುನಾವಣೆಯ ಫಲಿತಾಂಶ ಇಂದು ಮಂಗಳವಾರ ಅಧಿಕೃತ ವಾಗಿ ಘೋಷಿಸಲಾಯಿತು.
ಕಳೆದ ಮೂರು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಮತದಾನ ಪೂರ್ವ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ ಒಮನದು ತಿಂಗಳು ಕಾಲ ಮತದಾನ ಮುಂದೂಡಲಾಗಿತ್ತು. ನಂತರ ಕೆಲ ಶರತ್ತುಗಳನ್ನು ಹಾಕಿ ಮತದಾನಕ್ಕೆ ಅವಕಾಶ ನೀಡಿದ್ದ ಹೈ ಕೋರ್ಟ್ ಫಲಿತಾಂಶ ತಡೆ ಹಿಡಿಯಲು ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಇಂದು ಮತದಾನದ ಫಲಿತಾವಂಶ ಚುನಾವಣಾಧಿಕಾರಿ ಅಭ್ಯರ್ಥಿಗಳ ಸಮ್ಮೂಕದಲ್ಲಿ ಮತ ಎಣಿಕೆ ಮಾಡಿ ಅಧಿಕೃ ಘೋಷಣೆ ಮಾಡಿದರು.
ಚಿದ್ರಿಗೆ ಬಹುಪರಾಕ್:
ಮಹಾಮಂಡಳದ ನಿಕಟ ಪೂರ್ವ ಅಧ್ಯಕ್ಷ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತ ರಾವ್ ಚಿದ್ರಿ ತಂಡಕ್ಕೆ ಬಾರಿ ಬಹುಮತ ಪಡೆಯಿತು. ಒಟ್ಟು ಹದಿನಾಲ್ಕು ನಿರ್ದೇಶಕ ರಲ್ಲಿ ಹತ್ತು ನಿರ್ದೇಶಕರು ಪಂಡಿತರಾವ್ ಬೆಂಬಲಿತರು ಹಾಗೂ ಕುರಿ ಮತ್ತುಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿಯವರ ಬೆಂಬಲಿತರು ಜಯಗಳಿಸಿದರು.
ಈ ಮೂಲಕ ಮಹಾಮಂಡಳದ ಆಡಳಿತ ಪಂಡಿತರಾವ್ ಚಿದ್ರಿಯವರ ತಂಡಕ್ಕೆ ದಕ್ಕಿರುವದು ಸ್ಪಷ್ಟವಾಗಿದೆ.
ಗೆಲುವು ಸಾಧಿಸಿದವರು:
ಪಂಡಿತರಾವ್ ಚಿದ್ರಿ, ಸಂಗಮೇಶ, ನಿಂಗರಾಜ, ಮಹಾಲಿಂಗಪ್ಪ, ಈರಯ್ಯ ಪುಟ್ಟಸ್ವಾಮಿ, ಶಾಂತಗೌಡ ನಾಗನಟಗಿ, ರಾಮಪ್ಪ, ದೀಪಕ್, ರಮೇಶ, ನಾಗೇಶ, ಶರಣು ತಳ್ಳಿಕೇರಿ, ಕಾಶಿನಾಥ, ಜಯಪ್ಪ, ಹಾಗೂ ವಿಶಾಲ್.
ವಿಜಯೋತ್ಸವ: ಮಹಾಮಂಡಳ ದ ನಿರ್ದೇಶಕ ಚುನಾವಣ ಫಲಿತಾಂಶ ಹೊರಬರುತಿದ್ದಂತೆಯೇ ಅಭಿಮಾನಿಗಳು ಬಣ್ಣ ಅಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಕೆಪಿಸಿಸಿ ಮಹಿಳಾ ಪ್ರದಾನ ಕಾರ್ಯದರ್ಶಿ ಗೀತಾ ಪಂಡಿತರಾವ್ ಚಿದ್ರಿ. ಶ್ರೀ ನಿವಾಸ ಏಗನೂರು, ಹನುಮಂತ ಪೋಸ್ಟ್,ಮಾಳಪ್ಪ ಕೆಂಬಾವಿ, ಬಲಬೀಮ, ಎಸ್.ಬಿ. ಒಡೆಯರ್,ಸಾಬಣ್ಣ,ಆದಪ್ಪ,ರಾಮಣ್ಣ ಕಾಡ್ಲೂರು,ಮಲ್ಲಿಕಾರ್ಜುನ ಸೇರಿ ಅನೇಕರು ಇದ್ದರು.