ಮಳೆ ಅವಾಂತರ, ತಕ್ಷಣ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಅಗ್ರಪಡಿಸುತ್ತೇನೆ :ಬಿಜೆಪಿ ಮುಖಂಡ ಕಿವಡೆ
ಇಂಡಿ : ತಾಲೂಕಿನಲ್ಲಿ ಪ್ರಮುಖವಾಗಿ ಹಡಲಸಂಗ ಹೋರ್ತಿ ಸುತ್ತಮುತ್ತ ಮತ್ತು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸತತವಾಗಿ ಬೀಳುತ್ತಿರುವ ಭಾರಿ ಮಳೆಯಿಂದ ರೈತರು ಭಾರಿ ಸಂಕಷ್ಟಕ್ಕೀಡಾಗಿದ್ದಾರೆ.
ತೊಗರಿ, ಹತ್ತಿ, ಈರುಳ್ಳಿ ಹೀಗೆ ಅನೇಕ ಬೆಳೆಗಳು ಈ ಸತತ ಮಳೆಯಿಂದಾಗಿ ಸಂಪೂರ್ಣ ನಾಶವಾಗುತ್ತಿವೆ ಸ್ಥಳೀಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ರೈತರಿಗೆ ಬೆಳೆ ಪರಿಹಾರ ಒದಗಿಸಲು ಶ್ರಮಿಸಬೇಕು ಸತತ ಮಳೆಯಿಂದ ಬಡವರ ಮನೆಗಳು ಬೀಳುತ್ತಿವೆ ಹೀಗಾಗಿ ಸರ್ಕಾರ ತಕ್ಷಣ ಬೆಳೆ ಮನೆ ಸರ್ವೆ ಮಾಡಲು ಕ್ರಮ ಕೈಗೊಂಡು ಪರಿಹಾರ ಒದಗಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಅಗ್ರಪಡಿಸುತ್ತೇನೆ.
ಶ್ರೀ ಮಲ್ಲಿಕಾರ್ಜುನ ಕಿವಡೆ ಭಾಜಪ ಮುಖಂಡರು ಇಂಡಿ ಮಂಡಲ


















