ಇಂಡಿ : ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಹಣಮಂತರಾಯಗೌಡ ಆಯ್ಕೆ
ಇಂಡಿ : ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಹಣಮಂತರಾಯಗೌಡ ಪಾಟೀಲ ಅವರನ್ನು ಆಯ್ಕೆ ಮಾಡಿ ಇಂಡಿ ವಿಧಾನ ಸಭಾ ವ್ಯಾಪ್ತಿಯಲ್ಲಿ ಸಕ್ರಿಯವಾಗಿ ಸಂಘಟನಾತ್ಮಕ ಕೆಲಸ ಮಾಡಲು ಜವಾಬ್ದಾರಿ ನೀಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಹಾಗೂ ಭಾರತೀಯ ಜನತಾ ಪಕ್ಷದ ಮಂಡಲದ ಅಧ್ಯಕ್ಷ ಜವಾಬ್ದಾರಿಗೆ ಸಂಘಟನಾತ್ಮಕ ಹಿತದೃಷ್ಟಿಯಿಂದ ಹಣಮಂತ್ರಾಯಗೌಡ ಭೀಮನಗೌಡ ಪಾಟೀಲ (ಅಂಜುಟಗಿ) ರವರನ್ನು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ಆದೇಶ ಪತ್ರ ನೀಡಿದ್ದಾರೆ.