ಖೇಡಗಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ ಮಸಳಿ ಆಯ್ಕೆ
ಇಂಡಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವರಾಜ ನಿಂಗಣ್ಣ ಮಸಳಿ ಹಾಗೂ ಉಪಾಧ್ಯಕ್ಷರಾಗಿ ದೇವೇದ್ರ ರಾಮ ಕೊಟ್ಟಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಖೇಡಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಇನ್ನೂ ನೂತನ ಅಧ್ಯಕ್ಷ ಬಸವರಾಜ ಮಸಳಿ ಮಾತನಾಡಿ, ಸಂಘಕ್ಕೆ ಬರುವ ಎಲ್ಲ ರೀತಿಯ ಸೌಲಭ್ಯಗಳನ್ನು ನೇರವಾಗಿ ರೈತರು ಮತ್ತು ಷೇರುದಾರರಿಗೆ ತಲುಪಿಸುವ ಕಾರ್ಯವನ್ನು ಮಾಡುವುದಾಗಿ ತಿಳಿಸಿದರು.
ಇನ್ನೂ ಈ ಸಂದರ್ಭದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನೂತನ ಸದಸ್ಯರಾದ ನೂರಮ್ಮದ ನಾಗೂರ, ಬಸಣ್ಣ ಕಲಶೇಟ್ಟಿ, ರಮೇಶ್ ವಾಲಿಕಾರ, ನಿಸಾರ ಅಹ್ಮದ ನಾಗೂರ, ಯಲ್ಲಾಲಿಂಗ ಮಸಳಿ, ಗೌರಾಬಾಯಿ ವಾಲಿಕಾರ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಗೌರವಿಸಿದರು.


















