ಬಜೆಟ್ ದೇಶದ ಬಡವರ ಕಲ್ಯಾಣಕ್ಕಾಗಿ ಸಂಕಲ್ಪ : ಹಿರಿಯ ನ್ಯಾಯವಾದಿ ಎಸ್ ಜೆ ವಾಲಿಕಾರ
ಇಂಡಿ : ಬಜೆಟ್ ದೇಶದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು, ಒಟ್ಟಾರೆ ಅಭಿವೃದ್ಧಿಯನ್ನು ಸಾಧಿಸಲು, ಖಾಸಗಿ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು, ದೇಶೀಯ ಸೂಕ್ಷ್ಮತೆಗಳನ್ನು ಬಲಪಡಿಸಲು ಮತ್ತು ಮಧ್ಯಮ ವರ್ಗದ ವೆಚ್ಚದ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿದೆ. ಬಜೆಟ್ ದೇಶದ ಬಡವರ ಕಲ್ಯಾಣಕ್ಕಾಗಿ ಹಾಗೂ ವಿಕಸಿತ ಭಾರತ ನಿರ್ಮಾಣಕ್ಕಾಗಿ ಇಡುತ್ತಿರುವ ಸಂಕಲ್ಪ ಹಾಗೂ ಬಲವಾದ ಹೆಜ್ಜೆಯಾಗಿದೆ.
ಇವತ್ತಿನ ಬಜೆಟ್ ಸಾಮಾನ್ಯರಿಗೆ ಮತ್ತು ಮಹಿಳೆಯರಿಗೆ ಉತ್ತಮ ಹಾಗೂ ಮಾಧ್ಯಮ ವರ್ಗದವರಿಗೆ ಒಳ್ಳೆಯ ಬಜೆಟ್ ಇರುತ್ತದೆ ಮತ್ತು ಮುಂದಿನ ದೂರ ದೃಷ್ಟಿಯಿಂದ ಮಾಡಿದ ಬಜೆಟ್ ಇದೆ ಇವತ್ತಿನ ಬಜೆಟ್ ಎಲ್ಲರಿಗೂ ಒಳ್ಳೆಯ ಆಶಾದಾಯಕವಾಗಿದೆ