ಲಿಂಬೆ ನಾಡಿನಲ್ಲಿ ನಾಗರ ಪಂಚಮಿ ಸಂಭ್ರಮ : ಶ್ರದ್ಧಾ ಭಕ್ತಿ ಆಚರಣೆ
ಇಂಡಿ : ವಿಶೇಷ ಸಂಭ್ರಮ, ಸಡಗರ ಹಾಗೂ ಭಕ್ತಿ-ಭಾವದಿಂದ ಆಚರಿಸಲಾಗುವ ಹಬ್ಬವೆಂದರೆ ಅದು ನಾಗರ ಪಂಚಮಿ. ಈ ದಿನ ನಾಗರ ಹಾವುಗಳನ್ನು ಪೂಜಿಸಲಾಗುತ್ತದೆ. ನಾಗನ ಕಲ್ಲುಗಳಿಗೆ ಶಾಸ್ತ್ರೋಕ್ತ ಪೂಜೆ ನಡೆಯುತ್ತದೆ. ನಾಗ ದೇವರ ಆಶೀರ್ವಾದ ಪಡೆಯುವುದು ಮತ್ತು ದುಷ್ಟರಿಂದ ರಕ್ಷಣೆ ಪಡೆದುಕೊಳ್ಳಲು ಜನರು ನಾಗನಿಗೆ ಹಾಲು, ಹೂವು, ಹಣ್ಣು ಅರ್ಪಿಸುತ್ತಾರೆ. ಅದರಂತೆ ಲಿಂಬೆ ನಾಡಿನ ತಾಲ್ಲೂಕಿನಾದ್ಯಾಂತ ನಾಗಮೂರ್ತಿಗಳಿಗೆ ಹಾಲೆರೆಯುಚ ಮೂಲಕ ನಾಗರ ಪಂಚಮಿ ಆಚರಿಸಿದರು.
ಗುರುವಾರ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಸೇರಿಕೊಂಡು ಮನೆಯಲ್ಲಿ ಇರುವ ನಾಗಮೂರ್ತಿಗಳಿಗೆ ಹಾಲೆರೆಯುವ ಮೂಲಕ ನಾಗರಪಂಚಮಿಯನ್ನು ಆಚರಿಸಿದರು. ಶುಕ್ರವಾರ ಸಾರ್ವಜನಿಕವಾಗಿ ವಿವಿಧ ದೇವಸ್ಥಾನದಲ್ಲಿ ಕಲ್ಲು ನಾಗದೇವತಿಗಳಿಗೆ ಹಾಲೆರೆಯುವ ಕಾರ್ಯಕ್ರಮ, ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ನಾಗದೇವತಿಗಳಿಗೆ ಬೆಳಿಗ್ಗೆ 8 ಗಂಟೆಯಿಂದಲೆ ಗ್ರಾಮದ ಮಹಿಳೆಯರು ವಿಶೇಷ ಪೂಜೆಗಳು ನೆರವೇರಿಸಿ ಭಕ್ತಿ ಭಾವ ಮೆರೆದರು. ಪ್ರತಿ ಮನೆಯಲ್ಲಿ ಮಹಿಳೆಯರು ಕಳೆದ ಹಲವು ದಿನಗಳಿಂದ ಎಳ್ಳು, ಕರಚಿಕಾಯಿ, ಉಂಡಿ, ಕರದಂಟು, ಚಕ್ಕಲಿ, ಜಿಲೇಬಿ ವಿವಿಧ ದಿನಸಿ ಪದಾರ್ಥಗಳನ್ನು ತಯಾರಿಸಿ ನಾಗದೇವತಿಗಳಿಗೆ ನೈವೇದ್ಯ ಅರ್ಪಿಸಿದರು. ಅಲ್ಲದೆ ಬಂಧು ಬಾಂಧವರಿಗೆ ಉಣಬಡಿಸುವುದು ಗ್ರಾಮದಲ್ಲಿ ಸಾಮಾನ್ಯವಾಗಿತ್ತು.
ಶ್ರಾವಣ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಅವುಗಳಲ್ಲೇ ಮೊದಲನೆಯದ್ದೇ ಈ ನಾಗರ ಪಂಚಮಿ. ಉತ್ತರ ಕರ್ನಾಟಕದಲ್ಲಿ ಈ ಹಬ್ಬಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಇದನ್ನು ಮಹಿಳೆಯರ ಹಬ್ಬವೆಂದೇ ಹೇಳಲಾಗುತ್ತದೆ. ಅಮವಾಸ್ಯೆಯಿಂದ ಆರಂಭಗೊಳ್ಳುವ ಈ ಹಬ್ಬಕ್ಕಾಗಿ ಹಲವು ದಿನಗಳಿಂದಲೇ ತಯಾರಿ ನಡೆದಿರುತ್ತದೆ. ಎಳ್ಳು ಹುರಿಯುವುದು, ಕರಚಿಕಾಯಿ, ಉಂಡಿ, ಕರದಂಟು, ಚಕ್ಕಲಿ, ಜಿಲೇಬಿ, ಚೂಡಾ ತಯಾರಿಸಿ ಬಂಧು ಬಾಂಧವರಿಗೆ ಹಂಚಿ ಸಂಭ್ರಮಿಸುವ ಹಬ್ಬವಿದು. ಅದರಂತೆ ತಾಂಬಾ ಗ್ರಾಮದಲ್ಲಿ ಶುಕ್ರವಾರ ಸಾರ್ವಜನಿಕವಾಗಿ ವಿವಿದ ದೇವಸ್ಥಾನದಲ್ಲಿ ಕಲ್ಲು ನಾಗದೇವತಿಗಳಿಗೆ ಹಾಲೆರೆಯುವ ಕಾರ್ಯಕ್ರಮ ಮಹಿಳೆಯರು ವಿಶೇಷ ಪೂಜೆಗಳು ನೆರವೇರಿಸಿ ಭಕ್ತಿ ಭಾವ ಮೆರೆದರು.