ಖೊಟ್ಟಿ ಮತದಾನಕ್ಕೆ ಯತ್ನ..! ಪ್ರಕರಣ ದಾಖಲು..! ಎಲ್ಲಿ ಗೊತ್ತಾ..?
ಇಂಡಿ: ಜಿಲ್ಲೆಯ ಮರಗೂರ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಲಾಗಿದೆ ಎಂದು ಮಾಜಿ ಶಾಸಕ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಹುದ್ದೆಗೆ ಸ್ಪರ್ಧೆ ಮಾಡಿದ ಸಾರ್ವಭೌಮ ಬಗಲಿ ದೂರು ದಾಖಲು ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಮರಗೂರ ಗ್ರಾಮದಲ್ಲಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಫೆಬ್ರವರಿ 11ರಂದು ನಡೆಯಿತು. ಈ ವೇಳೆ ಮೃತಪಟ್ಟಿರುವ ಗುರುಬಸಪ್ಪ ದೇಸಾಯಿ ಎಂಬುವರ ಹೆಸರಿನಲ್ಲಿ ನಕಲಿ ಒಟರ್ ಐಡಿ ಕಾರ್ಡ್ ತಯಾರಿಸಿ ಅನಾಮಿಕ ಮತದಾನ ಮಾಡಲು ಬಂದಿದ್ದಾನೆ. ಇತನ್ನು ಹಿಡಿಯಲು ಹೋದಾಗ ಪರಾರಿಯಾಗಿದ್ದಾನೆ. ಈ ಬಗ್ಗೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮ್ಯಾನೇಜಿಂಗ್ ಡೈರೆಕ್ಟರ್ ಮಾಹಿತಿ ನೀಡಿದ್ರೂ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಅಪರಿಚಿತನ ವಿರುದ್ಧ ಕೇಸ್ ದಾಖಲಾಗಿದೆ. ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಎಫ್ ಐ ಆರ್ ನಂ:14/2024 ಅಡಿಯಲ್ಲಿ ಭಾರತೀಯ ದಂಡ ಸಂಹಿತೆ 1860 ಸೆಕ್ಷನ್ 419,420,468,471 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.