ಇಂಡಿ : ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಜನವರಿ 14 ಕ್ಕೆ ವರ್ಷ ಕಳಿದಿದೆ. ಇದರ ನೆನಪಿಗಾಗಿ ಜನವರಿ 14 ರಂದು ಬಾಗಲಕೋಟ ಜಿಲ್ಲೆಯ ಕೂಡಲಸಂಗಮದಲ್ಲಿ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರಧಾನ ಮತ್ತು ಮೀಸಲಾತಿ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಇತ್ತೀಚಿಗೆ ಕೊವಿಡ್ ಮತ್ತು ಓಮಿಕ್ರಾನ್ ಎಂಬ ಮಹಾ ರೋಗದ ಕಾಟ ಹೆಚ್ಚಾಗಿದ್ದರ ಹಿನ್ನಲೆ, ಸರಕಾರ ಕೆಲವು ನಿರ್ಬಂಧದ ನಿಯಮಾವಳಿ ರಚನೆ ಮಾಡಿ ಆದೇಶ ಹೊರಡಿಸಿದೆ. ಆ ಕಾರಣದಿಂದ, ಜನರ ಆರೋಗ್ಯ ದೃಷ್ಟಿಯಿಂದ ವರ್ಷಾಚರಣೆ ಮತ್ತು ಜಾಗರಣೆ ಕಾರ್ಯಕ್ರಮ ರದ್ದು ಗೊಳಿಸಲಾಗಿದೆ ಎಂದು ಪಟ್ಟಣದ ಅಕ್ಕ ಮಹಾದೇವಿ ಸೌಹಾರ್ದ ಸಹಕಾರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಚ್. ಬಿರಾದಾರ ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಕಾರ್ಯದರ್ಶಿ ಶಿವಾನಂದ ಚಾಳಿಕಾರ, ಮಂಜುನಾಥ ಕಾಮಗೊಂಡ, ಬಾಳು ಮುಳಜಿ, ಸುನೀಲಗೌಡ ಬಿರಾದಾರ, ಚಿದುಗೌಡ ಬಿರಾದಾರ, ರವಿಗೌಡ ಪಾಟೀಲ್, ಬುದ್ದುಗೌಡ ಪಾಟೀಲ್, ಅರವಿಂದ ಪಾಟೀಲ್, ಚಂದ್ರಾಮ ಮೇಡೇದಾರ ಉಪಸ್ಥಿತರು.