ವಿಶ್ವ ಭಾರತಿ ವಿದ್ಯಾಕೇಂದ್ರದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ ಹಾಗೂ ಸಾವಿತ್ರಿ ಬಾಯಿ ಫುಲೆ ಜಯಂತಿ.
ಇಂಡಿ: ಸಿದ್ದೇಶ್ವರ ಸ್ವಾಮೀಜಿಯವರ ಆದರ್ಶಗಳನ್ನು
ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸ್ವಾರ್ಥಕವಾಗುತ್ತದೆ ಎಂದು ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಪಿ.ಜಿ. ಕಲ್ಮನಿ ಹೇಳಿದರು.
ಮಂಗಳವಾರ ತಾಲೂಕಿನ ಹಿರೇಬೇವನೂರ
ಗ್ರಾಮದ ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರಾಥಮಿಕ,
ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ
ಮಾಧ್ಯಮ ಶಾಲೆಯಲ್ಲಿ ನಡೆದ ಸಿದ್ದೇಶ್ವರ ಶ್ರೀಗಳಿಗೆ
ನುಡಿ ನಮನ ಹಾಗೂ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನುಡಿದಂತೆ ನಡೆದ, ನಡೆದಾಡುವ ದೇವರು. ಸಿದ್ದೇಶ್ವರ
ಅಪ್ಪಾಜಿಯವರ ಪ್ರವಚನದ ಒಂದೊಂದು ನುಡಿಗಳು ದೈವ ಸಂಭೂತವಾಗಿವೆ. ಅವರು ಜನ್ಮತಾಳಿದ ಜಿಲ್ಲೆಯ ಪುಣ್ಯಭೂಮಿಯಲ್ಲಿ ನಾವಿರುವುದೆ ಒಂದು ಪುಣ್ಯ. ಅವರು
ಹೇಳುವ ಒಂದೊಂದು ಮಾತುಗಳು ನಮ್ಮ ಬದುಕಿನ
ದಾರಿಗಳಾಗಿವೆ. ವಿದ್ಯಾರ್ಥಿಗಳು, ಗುರುಗಳು ಮತ್ತು
ತಂದೆ-ತಾಯಿಗಳ ಮಾತನ್ನು ಚಾಚುತಪ್ಪದೆ ಪಾಲಿಸಿದರೆ ನಮ್ಮ ಜೀವನ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ಕಾರ್ಯಕ್ರಮದ
ಅಧ್ಯಕ್ಷತೆವಹಿಸಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಯವರ ಅಂತ್ಯಂತ ಸರಳ ವ್ಯಕ್ತಿತ್ವವನ್ನು ಹೊಂದಿದ್ದರು. ಅಷ್ಟೇ ಸರಳ ಭಾಷೆಯಲ್ಲಿ ಅವರ ನುಡಿಗಳು ಮಾನವ ಕುಲಕ್ಕೆ ಬದುಕುವ ರೀತಿಯನ್ನು ತಿಳಿಸಿದರು. ಅವರ ಬದುಕೇ ಮನುಕುಲಕ್ಕೆ ಮಾದರಿ ಎಂದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಶ್ರೀದೇವಿ ಕಲ್ಮನಿ, ಆಂಗ್ಲ ಮಾಧ್ಯಮ ಮುಖ್ಯ ಗುರು ಸುನಿಲ್ ವಿ.ಆರ್, ಶಿಕ್ಷಕರಾದ ಪ್ರಕಾಶ್ ಕಲ್ಮನಿ, ತುಕಾರಾಮ್ ಚವ್ಹಾಣ, ಸಚೀನ್ ಅಡಿಗುಂಡಿ, ಪರಮೇಶ್ವರ ಇಂಗಳೆ, ಪ್ರವೀಣ ಹೊಸಗೌಡರ್, ರಾಮ್ ಚವ್ಹಾಣ, ಜಾನ್ ವಿ, ಥಾಮಸ್ ಎಸ್.ಜಿ, ಹ್ಯಾರಿಶ್, ಎಲ್.ಎನ್. ಕರ್ಜಗಿ, ಶಿವಾನಂದ ಅಂದೇವಾಡಿ, ಜೆ.ಎ. ಬಿರಾದಾರ, ಎಸ್.ಎಮ್.
ಭಾಸಗಿ, ಬಿ.ಕೆ. ಉಕ್ಕಲಿ, ಬಿ.ಎಸ್. ನಾಟೀಕಾರ್, ಎಸ್.ಬಿ. ಮಾನೆ, ಎಸ್.ಬಿ. ವಳಸಂಗ, ಅನಿತಾಗೌಡ, ರಾಜೇಶ್ವರಿ ಗೌಡ, ಗಿರಿಜಾ, ರಾಜಶ್ರೀ ಸಂಗಮ್, ಅಶ್ವಿನಿ ಚವ್ಹಾಣ, ಸಾರಾ ಕೆ, ದೀಪಾಮಾಲಾ, ಜೀನತ್
ಮಧು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ಶಿವಾನಂದ ಕಲ್ಮನಿ ನಿರೂಪಿಸಿ, ವಂದಸಿದರು.
ಇದೇ ಸಂದರ್ಭದಲ್ಲಿ ವಿ.ಜಿ. ಕಲ್ಮನಿ ಮಾತನಾಡಿ,
ಅಕ್ಷರದ ಅವ್ವ ಭಾರತದ ಮೊದಲ ಮಹಿಳಾ ಶಿಕ್ಷಕಿ
ಸಾವಿತ್ರಿ ಬಾಯಿ ಫುಲೆ ಅವರ ಜಯಂತಿ
ಪ್ರಯುಕ್ತ ಸ್ವತಂತ್ರವಾಗಿ ಹೆಣ್ಣು ಮಕ್ಕಳು
ಶಿಕ್ಷಣ ಪಡೆಯಿತ್ತಿದ್ದರೆ ಅದು ಹಿಂದೆ ಸಾವಿತ್ರಿ ಬಾಯಿ
ಫುಲೆಯಂತೆ ಅನೇಕ ದಿಟ್ಟ ಮಹಿಳೆಯರ
ಹೋರಾಟದ ಫಲವಾಗಿ ಮಹಿಳೆಯರು ಇಂದು ಎಲ್ಲಾ
ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಕಠಿಣ
ಕಾಲದಲ್ಲೂ ಪುಣೆಯಲ್ಲಿ ಹೆಣ್ಣು ಮಕ್ಕಳ ಶಾಲೆ
ಪ್ರಾರಂಭಿಸಿ. ಶಿಕ್ಷಣ ನೀಡಿದ ದಿಟ್ಟ ಸಾವಿತ್ರಿ ಬಾಯಿ
ಫುಲೆಯಂತೆ ಸಾಧನೆ ಮಾಡಬೇಕು ಎಂದರು.
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಿದ್ದೇಶ್ವರ ಶ್ರೀಗಳಿಗೆ ನುಡಿ ನಮನ
ಕಾರ್ಯಕ್ರಮ ಹಾಗೂ ಸಾವಿತ್ರಿ ಬಾಯಿ ಫುಲೆ ಅವರ
ಜಯಂತಿ ಕಾರ್ಯಕ್ರಮದಲ್ಲಿ ಪಿ.ಜಿ. ಕಲ್ಮನಿ ಮಾತನಾಡಿದರು.