ಪೌರ ಕಾರ್ಮಿಕರು ಸದಾ ಸ್ಮರಿಣೀಯರು ; ಎಸಿ ಆಬೀದ್ ಗದ್ಯಾಳ
ಪೌರಕಾರ್ಮಿಕರನ್ನು ಮಾತೃಹೃದಯಿಂತೆ ಕಾಣಬೇಕು..!
ಇಂಡಿ : ಸುಂದರ ಆರೋಗ್ಯವಂತ ಸಮಾಜಕ್ಕೆ ಪೌರಕಾರ್ಮಿಕರ ದೊಡ್ಡ ಕೊಡುಗೆ ಎಂದು ಕಂದಾಯ ಉಪವಿಭಾಗ ಅಧಿಕಾರಿ ಹಾಗೂ ಪುರಸಭೆ ಆಡಳಿತ ಅಧಿಕಾರಿ ಆಬೀದ್ ಗದ್ಯಾಳ ಅಧ್ಯಕ್ಷತೆ ವಹಿಸಿ ಶನಿವಾರ ಮಾತಾನಾಡಿದರು.
ಪಟ್ಟಣದ ಪುರಸಭೆ ಆಶ್ರಯದಲ್ಲಿ ಡಾ|| ಬಾಬು ಜಗಜೀವನರಾಂ ಸಭಾಭವನದಲ್ಲಿ ಜರುಗಿದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೀರುಣಿಸುವ ಮೂಲಕ ಚಾಲನೆ ನೀಡಿದ್ದರು. ತದನಂತರ ಒಟ್ಟು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನೆರೆವರಿಸಿ ಮಾತಾನಾಡಿದರು.
ಇನ್ನೂ ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಎಂತಹ ಪ್ರಕೃತಿ ಮಾರಕ ಸಂದರ್ಭದ ಸಂದಿಗ್ಧಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.
ಇನ್ನೂ ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಸತೀಶ್ ಕುಂಬಾರ ಮಾತಾನಾಡಿದ ಅವರು, ಪೌರ ಕಾರ್ಮಿಕರು ಸದಾ ಸ್ಮರಣೀಯರು. ಅವರ ಶ್ರೋಯೋಭಿವೃದ್ಧಿಗೆ ಸರಕಾರ ಮತ್ತು ಸಂಘ, ಸಂಸ್ಥೆಗಳು ಮನಸ್ಸು ಮಾಡಬೇಕಿದೆ ಎಂದರು. ಅದಲ್ಲದೇ ಪೌರಕಾರ್ಮಿಕರನ್ನು ಪ್ರತಿಕ್ಷಣವು ಮಾತೃ ಹೃದಯದಿಂದ, ಹೃದಯವಂತಿಕೆಯಿಂದ ಕಾಣುವುದೇ ಅವರಿಗೆ ಸಲ್ಲಿಸುವ ಕೃತಜ್ಞತೆ ಎಂದು ಹೇಳಿದರು.
ಇನ್ನೂ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಸರ್ವರನ್ನು ಸ್ವಾಗತ ಕೋರಿ ಪ್ರಾಸ್ತಾವಿಕ ವಾಗಿಮಾತಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಲಿಂಬಾಜಿ ರಾಠೋಡ, ಜಯರಾಮ ರಾಠೋಡ, ಭೀಮಾಶಂಕರ ಮೂರಮನ, ಶಬ್ಬೀರ್ ಖಾಜಿ, ಜಾಗೀರ್ ಸೌದಾಗರ, ಉಮೇಶ್ ದೀಗಿನಾಳ, ಶ್ರೀಶೈಲ ಪೂಜಾರಿ, ಸುದೀರ ಕರಕಟ್ಟಿ, ಅಯೂಬ್ ಬಾಗವಾನ, ತಿಪ್ಪಣ್ಣ ಉಟಗಿ, ಬುದ್ದುಗೌಡ ಪಾಟೀಲ ಮತ್ತು ಪೌರ ಕಾರ್ಮಿಕರು, ಕಿರಿಯ ಆರೋಗ್ಯ ಸಹಾಯಕ ಅಧಿಕಾರಿ ಸೋಮನಾಯಕ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.