ಬಿಹಾರ: ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ವೀರ್ ಕುಂವರ್ ಸಿಂಗ್ ಅವರ 164 ನೇ ಪುಣ್ಯತಿಥಿಯಂದು ಭಾರತೀಯರು ಈ ದಾಖಲೆ ಬರೆದಿದ್ದಾರೆ. 77 ಸಾವಿರ ಜನರು ಏಕಕಾಲಕ್ಕೆ ಭಾರತದ ರಾಷ್ಟ್ರಧ್ವಜ ಹಾರಿಸುವ ಮೂಲಕ ಪಾಕಿಸ್ತಾನದ 18 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಈ ಒಂದು ದಾಖಲೆ ಮುರಿಯಲಾಗಿದೆ. 2004 ರಲ್ಲಿ ಲಾಹೋರ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ 56,000 ಪಾಕಿಸ್ತಾನಿಯರು ತಮ್ಮ ರಾಷ್ಟ್ರಧ್ವಜ ಹಾರಿಸಿದ್ದು ಈ ಹಿಂದಿನ ವಿಶ್ವ ದಾಖಲೆಯಾಗಿತ್ತು. ಇದೀಗ 77 ಸಾವಿರ ಜನರು ಏಕಕಾಕ್ಕೆ ರಾಷ್ಟ್ರಧ್ವಜ ಹಾರಿಸಿ ಪಾಕಿಸ್ತಾನದ ವಿಶ್ವ ದಾಖಲೆಯನ್ನು ಭಾರತೀಯರು ಮುರಿದಿದ್ದಾರೆ.