ಅಮೃತ್ ಬಾರ್ ಬೀಗ ಹೊಡೆದು ಸುಮಾರು 60 ಲೀಟರ್ ಮಧ್ಯ ಕಳ್ಳತನ
ಹನೂರು :ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡ ರಾತ್ರಿ ಕಳ್ಳರ ತಂಡ ಮಧ್ಯದ ಅಂಗಡಿಯ ಬೀಗ ಮುರಿದು ಸುಮಾರು 35ರಿಂದ 40 ಸಾವಿರ ರೂ ಮೌಲ್ಯದ 60 ಲೀಟರ್ ಮಧ್ಯ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನ ಸಿ.ಸಿ.ಟಿವಿಯಲ್ಲಿ ವ್ಯಕ್ತಿಯೊಬ್ಬ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಕಳ್ಳತನ ಮಾಡುತ್ತಿರುವುದು ಸೆರೆಯಾಗಿದೆ.ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿವೆ.
ಈ ಸಂದರ್ಭದಲ್ಲಿ ಪಿ,ಎಸ್,ಐ ರಿಹಾನ ಬೇಗಂ, ರಾಘವೇಂದ್ರ, ನಾಗೇಂದ್ರ, ನೂರ್ ಅಹಮದ್, ಕಲೀಲ್, ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



















