ತಾಲ್ಲೂಕಿನ ಮಾರ್ಸನಹಳ್ಳಿ ಗ್ರಾಮದಲ್ಲಿ 40 ಕುರಿಗಳ
ಕಳ್ಳತನ
40 ಕುರಿ ಕಳ್ಳತನ, ಕುರಿಗಾಯಿ ಕಂಗಾಲು..! ಎಲ್ಲಿ..? ಯಾವ ಊರಲ್ಲಿ..?
ಇಂಡಿ: ತಾಲೂಕಿನ ಕೊನೆಯ ಗ್ರಾಮವಾದ ಮಾರ್ಸನಳ್ಳಿ
ಗ್ರಾಮದಲ್ಲಿ ಫೆ.2 ಶುಕ್ರವಾರ ಮದ್ಯರಾತ್ರಿಯಲ್ಲಿ 40
ಕುರಿಗಳ ಕಳ್ಳತನ ವಾಗಿದ್ದು, ಕುರಿಗಾಯಿಗಳು
ಕಂಗಾಲಾಗಿದ್ದಾರೆ.
ಮಾರ್ಸನಳ್ಳಿ ಗ್ರಾಮದ ಬಡ ರೈತ ನಿಂಗಪ್ಪ ಪೂಜಾರಿ ಗೆ
ಸೇರಿದ 19 ಕುರಿಗಳು, ಸೊನಕನಹಳ್ಳಿಯ ರಾಯಪ್ಪ
ಸೊನಕನಹಳ್ಳಿಗೆ ಸೇರಿದ 9 ಕುರಿಗಳು ಹಾಗೂ ಶೀಲಸಿದ್ದ
ಬಸನಾಳಗೆ ಸೇರಿದ 13 ಕುರಿಗಳು ಒಟ್ಟು 40 ಕುರಿಗಳು
ಕಳ್ಳತನವಾಗಿವೆ. ಈ ಬಡ ಕುರಿಗಾಗಿಗಳು ದೂರದ ಸೊನಕನಹಳ್ಳಿಯಿಂದ ಹೂಟ್ಟೆಪಾಡಿಗಾಗಿ ನೀರಾವರಿ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಮಾರ್ಸನಳ್ಳಿ ಗ್ರಾಮಕ್ಕೆ ಬಂದಿದ್ದರು. ಶುಕ್ರವಾರ ಮಧ್ಯರಾತ್ರಿ ದುಷ್ಕರ್ಮಿಗಳು ರೈತರ ಬದುಕಿಗೆ ಆಸೆರೆಯಾಗಬೇಕಿದ್ದ ಕುರಿಗಳನ್ನುbಕಳ್ಳತನ ಮಾಡಿದ್ದಾರೆ.
ಕುರಿಗಾರರಿಗೆ ಬೇಟಿಯಾದ ಬಿ.ಡಿ. ಪಾಟೀಲ :
ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹಾಗೂ ಹಂಜಗಿ ಗ್ರಾಮದ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಮುತ್ತಪ್ಪ
ಪೆÇೀತೆ ಕಳ್ಳತನವಾದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಬಡ ರೈತರಿಗೆ ಸ್ವಾಂತಾತ ಹೇಳಿ, ಸಂಬಂಧಿಸಿದ ಇಲಾಖೆಗೆ ಪೋನ್ ಕರೆ ಮಾಡಿ ಕಳ್ಳರನ್ನು ಶೀಘ್ರ ಬಂಧಿಸಿ, ಅಮಾಯಕ ಕುರಿಗಾಯಿಗಳಿಗೆ ನ್ಯಾಯ ಒದಗಿಸಬೇಕಂದು ಹಾಗೂ ಸೂಕ್ತ ಪರಿಹಾರ ನೀಡಬೇಕು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಕ್ರೈಂ ಬ್ರಾಂಚ್ ಪೊಲೀಸರು ಹಾಗೂ ಡಿವೈಎಸ್ಪಿ ಜಗದೀಶ್ ಸ್ಥಳಕ್ಕೆ ಬೇಟಿ ನೀಡಿ, ಶೀಘ್ರವಾಗಿ ಆರೋಪಿಗಳನ್ನು ಬಂದಿಸಲಾಗುವದೆಂದು ಭರವಸೆ ನೀಡಿದ್ದಾರೆ.
ಇಂಡಿ: ತಾಲ್ಲೂಕಿನ ಮಾರ್ಸನಳ್ಳಿ ಗ್ರಾಮಕ್ಕೆ ಶನಿವಾರ ಜೆಡಿಎಸ್ ಮುಖಂಡರು ಭೇಟಿ ನೀಡಿ ಕುರಿಗಾಯಿಗಳಿಗೆ ಸಾಂತ್ವನ ಹೇಳಿದರು.