ಒಂದೇ ಕುಟುಂಬದ 13 ಜನ ಸದಸ್ಯರು ವೃಕ್ಷಥಾನ್ ಹೆರಿಟೇಜ್ ನಲ್ಲಿ ಹೆಸರು ನೋಂದಾಯಿಸಿ ಗಮನ ಸೆಳೆದಿದ್ದಾರೆ
ವಿಜಯಪುರ, ನ. 28: ವೃಕ್ಷಥಾನ್ ಹೆರಿಟೇಜ್ ರನ್ ನೋಂದಣಿ ಕಡೆಯ ದಿನ ಸಮೀಪಿಸುತ್ತಿದ್ದಂತೆ ಕುಟುಂಬ ಸದಸ್ಯರ ಸಮೇತ ಹೆಸರು ನೋಂದಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ಕುಟುಂಬದ 13 ಜನ ಸದಸ್ಯರು ಹೆಸರು ನೋಂದಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.
ಚಡಚಣ ತಾಲೂಕಿನ ದೇವರ ನಿಂಬರಗಿ ಮೂಲದ ಮತ್ತು ಈಗ ಬೆಂಗಳೂರು, ಪುಣೆ ಮತ್ತು ವಿಜಯಪುರದಲ್ಲಿ ನೆಲೆಸಿರುವ ಸಾಲೋಟಗಿ ಕುಟಂಬದ ಒಂಬತ್ತು ಜನರು ತಮ್ಮ ಹೆಸರು ನೋಂದಾಯಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.
ಇತ್ತೀಚೆಗಷ್ಟೇ ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ 50 ಕಿ. ಮೀ. ಓಡಿ ಗಮನ ಸೆಳೆದಿರುವ ರಘು ಸಾಲೋಟಗಿ ಅವರು ಕುಟುಂಬದ 13 ಜನರು ಒಟ್ಟಿಗೆ ಹೆಸರು ನೋಂದಾಯಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಯರ್ ಆಗಿರುವ ರಘು ಸಾಲೋಟಗಿ ಈ ಬಾರಿ 21 ಕಿ. ಮೀ. ಓಟದಲ್ಲಿ ಹೆಸರು ನೋಂದಾಯಿಸಿದ್ದರೆ, ಆರ್ಕಿಟೆಕ್ಟ್ ಆಗಿರುವ ಅವರ ಪತ್ನಿ ವೀಣಾ ಸಾಲೋಟಗಿ 5 ಕಿ. ಮೀ. ಓಟದಲ್ಲಿ ಹೆಸರು ನೋಂದಾಯಿಸಿದ್ದಾರೆ. ಇದೇ ವೇಳೆ, ಪುಣೆಯಲ್ಲಿ ಸಾಫ್ಟವೇರ್ ಆಗಿರುವ ಮತ್ತು ರಘು ಅವರ ಸಹೋದರ ಅನೀಲ ಸಾಲೋಟಗಿ ಹಾಗೂ ವಿಜಯಪುರದಲ್ಲಿ ವಾಸಿಸುವ ಸುನೀಲ ಸಾಲೋಟಗಿ ಕೂಡ 21 ಕಿ. ಮೀ. ಓಟದಲ್ಲಿ ಹೆಸರು ನೋಂದಾಯಿಸಿದ್ದಾರೆ. ಇವರ ಸಂಬಂಧಿಕರಾದ ವಿಜಯಪುರದ ಸರ್ವೇಶ ಬಿರಾದಾರ ಮತ್ತು ವಿಶ್ವೇಶ ಬಿರಾದಾರ ಅವರೂ ಕೂಡ 21 ಕಿ. ಮೀ. ಓಟದಲ್ಲಿ ಹೆಸರು ನೋಂದಾಯಿಸಿದ್ದಾರೆ. ಇವಕಲ್ಲಿ ಅನೀಲ ಸಾಲೋಟಗಿ ಮೂರು ಮತ್ತು ಸುನೀಲ ಸಾಲೋಟಗಿ ನಾಲ್ಕು, ಸರ್ವೇಶ ಬಿರಾದಾರ ಮತ್ತು ವಿಶ್ವೇಷ ಬಿರಾದಾರ ಐದಾರು ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡಿರುವುದು ಗಮನಾರ್ಹವಾಗಿದೆ.
ಅಷ್ಟೇ ಅಲ್ಲ, ರಘು ಸಾಲೋಟಗಿ ಅವರ ಸಂಬಂಧಿಕರಾದ ಮತ್ತು ವಿಜಯಪುರದಲ್ಲಿಯೇ ವಾಸಿಸುವ ನ್ಯಾಯವಾದಿ ಸುನಂದಾ ಖೇಡಗಿ, ಬಿಸಿನೆಸ್ ಮಾಡುತ್ತಿರುವ ಮಹಾನಂದಾ ನಡಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರಾದ ವಿಠ್ಠಲ ಬಿರಾದಾರ, ಲೋಕಾಯುಕ್ತ ಕಚೇರಿಯಲ್ಲಿ ಶೀಘ್ರಲಿಪಿಗಾರಳಾದ ಅನ್ನಪೂರ್ಣ ಬಿರಾದಾರ, ಆರ್ಕಿಟೆಕ್ಟ್ ಸ್ಮೀತಾ ಸಾಲೋಟಗಿ, ಇಂಡಿಯಲ್ಲಿ ಸ್ಟೆನೋಗ್ರಾಫರ್ ಆಗಿರುವ ಶೋಭಾ ಬಿರಾದಾರ, ಬಾಗಲಕೋಟೆಯಲ್ಲಿ ಲೆಕ್ಚರರ್ ಆಗಿರುವ ಶೋಭಾ ಬಿರಾದಾರ ಅವರೆಲ್ಲರೂ 5 ಕಿ. ಮೀ. ವಿಭಾಗದಲ್ಲಿ ಹೆಸರು ನೋಂದಾಯಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿರುವ ಅಪ್ಪು ಭೈರಗೊಂಡ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳಲು ಹೆಸರು ನೋಂದಾಯಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಮತ್ತೋಂದು ಕುಟುಂಬದ 13 ಜನ ಸದಸ್ಯರು ಹೆಸರು ನೋಂದಾಯಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.
ರಘು ಸಾಲೋಟಗಿ ಕುಟುಂಬ ಸದಸ್ಯರು
ಈ ಹಿಂದೆ ನಡೆದ ಪುಣೆ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡ ವಿಜಯಪುರ ಜಿಲ್ಲೆಯ ರಘು ಸಾಲೋಟಗಿ, ಅನೀಲ ಸಾಲೋಟಗಿ, ಸುನೀಲ ಸಾಲೋಟಗಿ, ಸರ್ವೇಶ ಬಿರಾದಾರ ಮತ್ತು ವಿಶ್ವೇಶ ಬಿರಾದಾರ ಅವರ ಗ್ರುಪ್ ಫೋಟೋ.