ಸರ್ಕಾರಿ ಪ್ರೌಢಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ
ಇಂಡಿ : 2025 -26 ನೇ ಸಾಲಿನ ಪ್ರೌಢಶಾಲಾ ವಿಭಾಗದ ನಾದ ಕೆಡಿ ವಲಯ ಮಟ್ಟದ ಕ್ರೀಡಾಕೂಟಗಳು ಸರ್ಕಾರಿ ಪ್ರೌಢಶಾಲೆ ಶಿರಶ್ಯಾಡ ಇಲ್ಲಿ ಜರುಗಿಸಲಾಯಿತು. ಸುಮಾರು 12 ಪ್ರೌಢಶಾಲೆಗಳು ಇದರಲ್ಲಿ ಭಾಗಿಯಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮುಜಾವರ ಹಾಗೂ ಕ್ಷೇತ್ರ ಶಿಕ್ಷಣ ಸಂಯೋಜನಾಧಿಕಾರಿ ಎಸ್ ಆರ್ ನಡಗಡ್ಡಿ ನೆರವೇರಿಸಿದರು.
ತೋಪಣ್ಣ ಬಿರಾದರ್ ಎಸ್ ಡಿ ಎಮ್ ಸಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷ ಯಶವಂತ ತೆಲಗ , ಹಾಗೂ ಸರ್ವ ಸದಸ್ಯರು, ಕರವೇ ಅಧ್ಯಕ್ಷ ಬಾಳು ಮುಳಜಿ, ಮತ್ತು ಸಿ ಆರ್ ಪಿ ಎಸ್ ಕೆ ಇಂಗಳೆ, ಹಾಗೂ ಮುಖ್ಯೋಪಾಧ್ಯಾಯ ಆರ್ ಕೆ ದುದಗಿ, ಶಾಲೆಯ ಹಿರಿಯ ಶಿಕ್ಷಕ ಎಸ್.ಜಿ. ಅಂದೇವಾಡಿ, ಎಸ್.ಜಿ.ತಾಳಿಕೋಟಿ, ವಿಜಯಕುಮಾರ ಬೇಕಿನಾಳ, ಎಸ್.ಎಸ್.ರಾಂಪುರ, ಶ್ರೀಶೈಲ ನಾವಿ, ಗಂಗಾಧರ ಕಾಂಬಳೆ, ಗುರುಬಾಯಿ ಶಿರಾಶ್ಯಾಡ , ಬೋರಮಣಿ, ನಾಗಣ್ಣ ಹಿರಾಪುರ, ಅಡುಗೆ ಸಿಬ್ಬಂದಿ, ಹಾಗೂ ಇತರ ಎಲ್ಲ ಸಿಬ್ಬಂದಿ ವರ್ಗದವರು, ಊರಿನ ಗಣ್ಯರು, ಧಾನಿಗಳು, ಹಾಗೂ ಪ್ರಾಥಮಿಕ ಶಾಲಾ ಮುಖ್ಯೆಗುರುಗುಳು, ಸಿಬ್ಬಂದಿಯವರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ದೈಹಿಕ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ, ಸದಸ್ಯರು ಹಾಗೂ ದೈಹಿಕ ಶಿಕ್ಷಣದ ಶಿಕ್ಷಕರು, ನಿರ್ಣಾಯಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಆರ್.ಕೆ.ದುದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ಎಸ್. ರಾಂಪೂರ ಪ್ರತಿಜ್ಞಾವಿಧಿ ಬೋಧಿಸಿದರು, ಕುಮಾರಿ ಕುಸುಮ ಹಾಗೂ ಸಂಗಡಿಗರು ಪ್ರಾರ್ಥಸಿದರು, ವಿಜಯಕುಮಾರ ಬೆಕಿನಾಳ ವಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮುಜವರ, ಕ್ಷೇತ್ರ ಶಿಕ್ಷಣ ಸಂಯೋಜಕರಾದ ಶ್ರೀ ನಡಗಡ್ಡಿ ಸರ್, ನಿವೃತ್ತ ಉಪನ್ಯಾಸಕ ಹಿರಿಯರು ಅದ ಶ್ರೀ ಮಜಗಿ ಸರ್, ಹಾಗೂ ಕರವೇ ಅಧ್ಯಕ್ಷ ಬಾಳು ಮುಳಜಿ ಇವರು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು. ಎ ಕೆ ಬಾಗವಾನ ಸರ್ ನಿರೂಪಿಸಿದರು.