ಇಂಡಿ : ಬಾವಿಯಲ್ಲಿ ಈಜುವ ಸಲುವಾಗಿ ಹೋಗಿ ಈಜು ಬಾರದೆ ಯುವಕ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಶನಿವಾರ ನಡೆದಿದೆ. 22 ವರ್ಷದ ಅಭಿಷೇಕ ಪತ್ತಾರ ಮೃತಪಟ್ಟಿರುವ ದುರ್ದೈವಿ. ಅಭಿಷೇಕ ಬಾವಿಯಲ್ಲಿ ಈಜುವ ಸಲುವಾಗಿ ಬಾವಿಯಲ್ಲಿ ಇಳಿದಿದ್ದಾನೆ. ಆದ್ರೇ, ಈಜು ಬಾರದೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.