” ಯೋಗ” ಆರೋಗ್ಯಕ್ಕೆ ಮನೆಯ ಔಷಧಿ..
ವಿಶ್ವದಲ್ಲಿ ಯೋಗಕ್ಕೆ ಮಹತ್ವದ ಸ್ಥಾನವಿದೆ..!
ಅಫಜಲಪುರ : ಯೋಗದಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅನೇಕ ಯೋಗ ಸಾಧಕರು ಸಾಧನೆ ಮಾಡಿದ್ದಾರೆ ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು.ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಅಚಲ ಸನಾತನ ವಿಶ್ವ ಆಧ್ಯಾತ್ಮಿಕ ವಿಜ್ಞಾನ ಯೋಗಾಶ್ರಮದಲ್ಲಿ 41 ದಿನಗಳ ಪರ್ಯಂತ ಕೈಗೊಂಡ ಕುಂಡಲಿನಿ ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು. ಲೋಕ ಕಲ್ಯಾಣಕ್ಕಾಗಿ ನಾವೆಲ್ಲರೂ ಒಳ್ಳೆಯ ರೀತಿಯಿಂದ ಬಾಳಿ ಬದುಕಬೇಕೆಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾರೆ. ಇವತ್ತಿನ ಯುವ ಸಮುದಾಯಕ್ಕೆ ಹಿರಿಯರ, ಸಾದು ಸಂತರ, ಶರಣರ ಆಶೀರ್ವಾದ ಮಾರ್ಗದರ್ಶನ ಅತೀ ಅವಶ್ಯಕ. ಜೀವನದಲ್ಲಿ ದಾರಿ ತಪ್ಪಿದಾಗ, ತಿದ್ದಿ ತಿಡಿ ಒಳ್ಳೆಯ ಮಾರ್ಗದಲ್ಲಿ ನಡೆಯಲು ಶರಣರ ಆಶೀರ್ವಾದ ಬೇಕು ಎಂದು ಹೇಳಿದರು.
ಚಿನ್ಮಯಗಿರಿಯ ಷ.ಬ್ರ. ಸಿದ್ದರಾಮ ಶಿವಾಚಾರ್ಯರು, ಗೊಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ನಾಗಣಸೂರದ ಮ.ನಿ.ಪ್ರ ಅಭಿನವ ಬಸವಲಿಂಗ ಮಹಾಸ್ವಾಮಿಗಳು, ಕೇದಾರ ಶ್ರೀಗಳು, ಗಂಗಾನ ಕರೇಸಿದ್ದ ಮಹಾರಾಯರು, ಶಿವಾನಂದ ಸ್ವಾಮೀಜಿ, ನಂಜುಂಡಯ್ಯಾ ಸ್ವಾಮಿ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಕುಂಡಲಿನಿ ಯೋಗ ಮಾಡಿದ ಸಕ್ಕುಬಾಯಿ ಅಲ್ಲಾಪೂರ, ರುಕ್ಮಿಣಿ ಚಣೇಗಾಂವ, ಶಾಂತಾಬಾಯಿ ಬಿರಾದಾರ, ಯಲ್ಲಮ್ಮ ದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ, ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಪುಂಡಲೀಕ ಕಟ್ಟಿ, ಮಲ್ಲಿಕಾರ್ಜುನ ಚಣೇಗಾಂವ, ಸಿದ್ರಾಮಪ್ಪ ಹಿರೇಕುರುಬರ, ಚಂದ್ರಶೇಖರ ಹೊಸೂರಕರ, ತುಕಾರಾಮ ಚಣೇಗಾಂವ, ಅಣ್ಣಾರಾವ ಮುಜಗೊಂಡ, ಕಲ್ಲಪ್ಪ ಅಲ್ಲಾ ಪರ, ಶಾಮರಾವ ಲಾಳಸಂಗಿ, ತಿರುಪತಿ ಅಲ್ಲಾಪೂರ, ಶ್ರೀಶೈಲ ಭುಯ್ಯಾರ, ವಿಠ್ಠಲ ಹಳಿಮನಿ, ಪೀರಪ್ಪ ನಿವರಗಿ, ಸಂಜೀವಕುಮಾರ ನನ್ನಾಜಿ, ಮಲ್ಲಪ್ಪ ನಿವರಗಿ, ಶ್ರೀಕಾಂತ ನಿವರಗಿ, ಬಸವರಾಜ ಅಳ್ಳಗಿ, ವಿಠ್ಠಲ ಚೋಪಡೆ ಉಪಸ್ಥಿತರಿದ್ದರು.