ಇಂಡಿ : ಪಟ್ಟಣದ ಕೆ ಜಿ ಎಸ್ ಶಾಲೆಯಲ್ಲಿ ಇಂದು ಎಂಟನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ಮತ್ತು ಪ್ರಾಣಾಯಾಮ ಮಾಡಿಸುವದರ ಮೂಲಕ ಆಚರಿಸಲಾಯಿತು.
ವಿಶ್ವ ಯೋಗ ದಿನದ ಅಂಗವಾಗಿ ಇಂದು ಶಾಲೆಯಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಶ್ರೇಣಿಕರಾಜ ಹಳ್ಳಿ ಇವರ ಅಧ್ಯಕ್ಷತೆಯಲ್ಲಿ ಯೋಗಾಸನ ಕಾರ್ಯಕ್ರಮ ಜರುಗಿತು. ಮೊದಲಿಗೆ ಪ್ರಾರ್ಥನಾ ಗೀತೆಯನ್ನು ಶ್ರೀಮತಿ ಬಿ ಸಿ ಭಗವಂತಗೌಡರು ಗುರುಮಾತೆ ನೆರವೇರಿಸಿದರು.
ಶಾಲೆಯ ದೈಹಿಕ ಶಿಕ್ಷಕರಾದ ದಶರಥ ಕೋರಿ ಗುರುಗಳು ವಿಧ್ಯಾರ್ಥಿನಿಯರೊಂದಿಗೆ ಸೂರ್ಯನಮಸ್ಕಾರ, ವೃಕ್ಷಾಸನ, ಪಾರ್ಶ್ವಕೋನಾಸನ ಅರ್ಧಕಟಿ ಚಕ್ರಾಸನ ಪಾದ ಹಸ್ತಾಸನ, ತ್ರಿಕೋನಾಸನ, ಪದ್ಮಾಸನ,ವಜ್ರಾಸನ, ಶಶಂಕಾಸನ, ಪಶ್ಚಿಮೋತ್ತಾಸನ, ಭುಜಂಗಾಸನ,ಮಕರಾಸನ ಮುಂತಾದ ಆಸನಗಳನ್ನು ಪ್ರಾತ್ಯಕ್ಷಿತವಾಗಿ ಮಾಡಿದರು.
ನಂತರ ಪ್ರಾಣಾಯಾಮಗಳ ಪ್ರಕಾರ ತಿಳಿಸಿ ಓಂಕಾರ ಹೇಳಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಯು ಎಚ್ ಚವ್ಹಾಣ ಗುರುಗಳು ಮಾತನಾಡಿ ಮನುಷ್ಯನ ದೀರ್ಘಾಯುಷ್ಯದ ಗುಟ್ಟು ಪ್ರಾಣಾಯಾಮ; ಯೋಗದಿಂದ ಮುನುಷ್ಯ ದೀರ್ಘಾಯುಷ್ಯವಂತನಾಗುತ್ತಾನೆ.
ಭೂಮಿಯ ಮೇಲಿನ ಜೀವಿಯಾಗಿ ಮತ್ತು ಜಲಚರ ಜೀವಿಯಾಗಿ ಅತೀ ನಿಧಾನವಾಗಿ ಉಸಿರಾಡುವ ಪ್ರಾಣಿಗಳ ಪೈಕಿ ಆಮೆ,ತಿಮಿಂಗಿಲಗಳಾಗಿವೆ. ಆಮೆ ತಿಮಿಂಗಿಲುಗಳು ಸುಮಾರು ಒಂದನೂರಾ ಐವತ್ತು ವರ್ಷಗಳಗಿಂತ ಹೆಚ್ಚು ವರ್ಷಗಳ ಕಾಲ ಬದುಕುತ್ತವೆ,ಹಾಗಾಗಿ ನಾವು ಪ್ರಾಣಾಯಾಮ ಸಾವಯುವದ ಸಂತುಲಿತ ಆಹಾರ ಕ್ರಮ ಹಾಗೂ ಯೋಗ,ವ್ಯಾಯಾಮಗಳಿಂದ ಮನುಷ್ಯನಲ್ಲಿ ರೋಗ ನೀರೋಧಕ ಶಕ್ತಿ ಹೆಚ್ಚಾಗಿ ಮನಸಿನ ಚಿತ್ತ ಚಂಚಲತೆ ದೂರಾಗಿ ಏಕಗ್ರಾತೆಯೊಂದಿಗೆ ಸುದೀರ್ಘವಾಗಿ ಬದುಕಲು ಸಾಧ್ಯವೆಂದರು.
ಇವೆಲ್ಲವುಗಳಿಗೆ ಪೂರಕವಾಗಿ ಮೌನ,ಧ್ಯಾನ,ತಪಸ್ಸು ಆತ್ಮಚಿಂತನೆ,ಸತ್ಸಂಗಗಳು ಆಧುನಿಕ ಯುಗದಲ್ಲಿ ಅತ್ಯುತ್ತಮ ಆರೋಗ್ಯಕ್ಕೆ ಒಳ್ಳೆಯದು ಎಂದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಗುರುಗಳು ಗುರು ಮಾತೆಯರು ಉಪಸ್ಥಿತರಿದ್ದರು.