ಜಿಲ್ಲೆಯನ್ನು ಒಂದು ಹೋಗಿ ಎರಡು ಮಾಡ್ತಿರೋ..! ಮೂರು ಮಾಡ್ತಿರೋ..! ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ : ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ
ವಿಜಯಪುರ : ಜಿಲ್ಲೆಯನ್ನು ವಿಭಜನೆ ಮಾಡಬಾರದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಒತ್ತಾಯಿಸಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಕ್ಕಾಗಿ ವಿಜಯಪುರವನ್ನು ವಿಭಜನೆ ಮಾಡಬಾರದು. ಅಲ್ಲದೇ, ಜಿಲ್ಲೆಯನ್ನು ಒಂದು ಹೋಗಿ ಎರಡು ಮಾಡ್ತಿರೋ ಅಥವಾ ಒಂದು ಹೋಗಿ ಮೂರು ಮಾಡ್ತಿರೋ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಯಾವ ಆಧಾರದ ಮೇಲೆ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡಲು ಹೊರಟಿದ್ದೀರಿ. ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ವಿಜಯಪುರ ಜಿಲ್ಲೆಯನ್ನು ವಿಭಜನೆ ಕಾಂಗ್ರೆಸ್ ಸರ್ಕಾರ ಕೈ ಬಿಡಬೇಕು ಎಂದು ವಾಗ್ದಾಳಿ ಮಾಡಿದರು.