ಅಬ್ಬಬ್ಬಾ ಎಷ್ಟು ಹಣ..! ವಿಜಯಪುರ ಪೋಲಿಸ್ ಕಾರ್ಯಾಚರಣೆ, ಆನ್ಲೈನ್ ವಂಚನೆಗಾರರಿಂದ ಜಾಗೃತರಾಗಿ
ವಿಜಯಪುರ: ಆಸೆಯೇ ದುಃಖಕ್ಕೆ ಕಾರಣ, ದುರಾಸೆಯೇ ಮೋಸಕ್ಕೆ ಕಾರಣ. ಅದಕ್ಕಾಗಿ ಆನ್ಲೈನ್ ವಂಚನೆಗಾರರಿಂದ ಜಾಗೃತರಾಗಿ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಸಿ.ಇ.ಎನ್ ಕೈಂ ಪೊಲೀಸ್ ಠಾಣೆಯಲ್ಲಿ ಕಳೆದ 03 ತಿಂಗಳಿಂದ 1) ಡಿಜಿಟಲ್ ಅರೆಸ್ಟ್ 2) ಕ್ರಿಷ್ಟೋ ಟ್ರೇಡಿಂಗ್ 3) ಪಾರ್ಟ್ ಟೈಮ್ ಜಾಬ್ 4) ಷೇರ್ ಮಾರ್ಕೇಟ್ ಟ್ರೇಡಿಂಗ್, ನಂತಹ ವಿವಿಧ ರೀತಿಯಲ್ಲಿ ಆನ್ಲೈನ್ ವಂಚನೆಗೊಳಗಾದವರು ದೂರು ನೀಡಿದ ಮೇರೆಗೆ ಒಟ್ಟು 12 ಸೈಬರ್ ಅಪರಾಧ ಪ್ರಕರಣಗಳು (ಆನ್ಲೈನ್/ಆರ್ಥಿಕ ವಂಚನೆ) ದಾಖಲಾಗಿದವು. ಸದರಿ ಪ್ರಕರಣಗಳ ತನಿಖೆ ಕೈಗೊಂಡು ಒಟ್ಟು 1,47,76,053 ರೂಪಾಯಿಗಳನ್ನು ಪಿರ್ಯಾದಿದಾರರಿಗೆ ಮರಳಿ ಕೊಡಿಸಲಾವಿದೆ ಎಂದರು.


















