ಬೆಳಗಾವಿ: ಗೋಕಾಕ್ ತಾಲೂಕಿನಲ್ಲಿ ಅಕ್ಕ-ತಂಗಿಯರ ಹಳ್ಳ ಹತ್ತಿರ ದಿನನಿತ್ಯ ತಮ್ಮ ಕೂಲಿ ಕೆಲಸಕ್ಕಾಗಿ ತೆರಳಿ ಮರಳಿ ಬೆಳಗಾವಿ ಎತ್ತ ಬರುವ ಸಂದರ್ಭದಲ್ಲಿ ಕ್ಲೋಸರ್ ಪಲ್ಟಿ ಆಗಿ ಎಂಟು ಜನ ಮೃತಪಟ್ಟು, ಇನ್ನುಳಿದ ಜನ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಆಸ್ಪತ್ರೆಗೆ ದಲಿತ ಸಂಘರ್ಷ ಭೀಮವಾದ ಸಂಘಟನೆಯವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳುವ ಮೂಲಕ ಗಾಯಾಳುಗಳಿಗೆ ಹಣ್ಣು ಹಂಪಲ ವಿತರಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ಮುಖಂಡರು ಭಾಗಿಯಾಗಿದ್ದರು.