ಇಂಡಿಯಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ
ಇಂಡಿ : ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮೀಗಳ 354 ನೇ ಆರಾಧನೆಯು ಆ.10 ರಿಂದ ಮೂರು ದಿನಗಳ ಕಾಲ ಪಟ್ಟಣದ ಶ್ರೀ ರಾಯರ ಮಠದಲ್ಲಿ ಶ್ರದ್ಧಾ- ಭಕ್ತಿ-ಭಾವಗಳಿಂದ ನೆರವೇರಲಿದೆಯೆಂದು ಶ್ರೀ ಮದ್ದಗುರು ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ಕುಲಕರ್ಣಿ ಹೇಳಿದರು.
ಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ
ಆ.10,11 ಮತ್ತು12 ರಂದು ಬೆಳ್ಳಿಗ್ಗೆ 6 ಕ್ಕೆ ಸುಪ್ರಭಾತ, 7ಕ್ಕೆ ನಿರ್ಮಾಲ್ಯ ವಿಸರ್ಜನೆ,8 ಕ್ಕೆ ಅಷ್ಟೋತ್ತರ,9ಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಮಧ್ಯಾಹ್ನ 12 ಕ್ಕೆ ಪಲ್ಲಕ್ಕಿ ಸೇವೆ, ರಥೋತ್ಸವ,ನೈವೇದ್ಯ, ಹಸ್ತೋದಕ, 1-30 ಕ್ಕೆ ತೀರ್ಥ ಪ್ರಸಾದವಿರುತ್ತದೆ.
ದಿ.10ರಂದು ಸಾಯಂಕಾಲ 7 ಘಂಟೆಗೆ ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ದಿ.11ರಂದು ಸಾಯಂಕಾಲ 7 ಘಂಟೆಗೆ ವಿಜಯಪುರದ ಸ್ವರಲೋಕ ತಂಡದ ಅಂಭಾದಾಸ ಜ್ಯೊಶಿ ಹಾಗು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ.ದಿ.12ರಂದು ಸಾಯಂಕಾಲ 7ಘಂಟೆಗೆ ಶ್ರೀ ಲಕ್ಷ್ಮಿ ಸತ್ಯನಾರಾಯಣ ಮಹಿಳಾ ಮಂಡಳಿಯಿಂದ ಭಜನೆ ಕಾರ್ಯಕ್ರಮವಿರುತ್ತದೆ. ಕಾರಣ ಎಲ್ಲಾ ದಿನಗಳ ಕಾರ್ಯಕ್ರಮದಲ್ಲಿ ರಾಯರ ಭಕ್ತರೆಲ್ಲರೂ ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾಗಲು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿ.ಎಸ್. ಜ್ಯೊಶಿ, ಪ್ರಸನ್ನ ದೇಶಪಾಂಡೆ,ಆನಂದ ಕುಲಕರ್ಣಿ, ದತ್ತಾ ಕುಲಕರ್ಣಿ, ಜೆ.ವ್ಹಿ.ಪಾಟೀಲ, ಸಂಜೀವ ದೇಶಪಾಂಡೆ ಇದ್ದರು.