ಜಗತ್ತಿನಲ್ಲೇ ಅತೀ ದೊಡ್ಡ ಸಂವಿಧಾನ :ದೇಗಿನಾಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಗುರುಗಳು
ಇಂಡಿ : ತಾಲೂಕಿನ ದೇಗಿನಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ನಿಮಿತ್ತ ಡಾ.ಬಿ. ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಧ್ವಜಾರೋಹಣವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಸುರೇಶ್ ಬೊಳೆಗಾಂವ ಮಾತನಾಡಿದ ಅವರು, ಭಾರತದ ಸಂವಿಧಾನವು ಜಗತ್ತಿನಲ್ಲೇ ಅತೀ ದೊಡ್ಡ ಸಂವಿಧಾನವಾಗಿದೆ. ನಮ್ಮ ದೇಶದ ಪ್ರಜೆಗಳಿಗೆ ಶಾಂತಿಯುತ ಜೀವನ ಮಾಡಲು ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ. ಸಂವಿಧಾನವು ಸರಕಾರದ ದಿಕ್ಕೂಚಿಯಾಗಿದೆ. ನಾವೆಲ್ಲ ಸಂವಿಧಾನವನ್ನು ಗೌರವಿಸುತ್ತಾ ಅದರ ಅಡಿಯಲ್ಲಿ ದೇಶದ ಪ್ರಗತಿಗೆ ಕೈಜೋಡಿಸಬೇಕು. ನಮ್ಮ ಸಂವಿಧಾನವು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬಂದಿತು. ಅಂದಿನಿಂದ ಇಂದಿನವರೆಗೆ ಭಾರತದ ಪ್ರಜೆಗಳಾದ ನಾವು ಶಾಂತಿಯುತ ಜೀವನವನ್ನು ನಡೆಸಲು ಸಂವಿಧಾನವು ಕಾರಣವಾಗಿದೆ ಎಂದು ಹೇಳಿದರು.
ಇನ್ನೂ ಶಾಲಾ ಮಕ್ಕಳಿಯಿಂದ ದೇಶ ಭಕ್ತಿ ಮೂಡಿಸುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಚಂದ್ರು ಬಿರಾದಾರ, ರಾಜಕುಮಾರ ಗಾಯಕವಾಡ, ಕಲ್ಲಪ್ಪ ಕೋಳಿ, ಆರ್ ಸಿ ಗೋಕಾವಿ, ಆರ್ ಸಿ ಚವ್ಹಾಣ, ಮಸಳಿ ಶಿಕ್ಷಕರು, ಗುರುಮಾತೆ ಬಿಸನಾಳ, ಗ್ರಾ.ಪಂ ಸದಸ್ಯ ಪ್ರಕಾಶ ಶಿವಶರಣ, ಆನಂದ ಹರಿಜನ , ಸುರೇಶ ಬಜಂತ್ರಿ, ಭೂತಾಳಿ ಇನ್ನೂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


















