ಇಂಡಿ : ಸಮಾಜದಲ್ಲಿ ಸ್ತ್ರೀ ಕೂಡ ಪ್ರಥಮ ಪ್ರಜೆ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಶಿಕ್ಷಕಿ ಪಾರ್ವತಿ ಸೊನ್ನದ (ತಳವಾರ) ಮಾತಾನಾಡಿದರು.
ಪಟ್ಟಣದ ಸಿಂದಗಿ ರಸ್ತೆಯ ಬಸವ ನಗರದಲ್ಲಿ ರಾಜ್ಯ ಅಭಿಮಾನಿ ಮಹಿಳಾ ತಳವಾರ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಚಾಲನೆ ನೀಡುವ ಮೂಲಕ ಮಾತಾನಾಡಿದರು.
ಮಹಿಳೆಯರಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಇದೆ. ಅವರಿಗೆ ಪ್ರೋತ್ಸಾಹ ಸಿಗಬೇಕು. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಅವರು ಎಂತಹ ಸವಾಲುಗಳನ್ನು ಬೇಕಾದರೂ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳುತ್ತಾರೆ’ ಎಂದು ಅಭಿಪ್ರಾಯಪಟ್ಟರು. ಅದಲ್ಲದೇ ರಾಜ್ಯ ಅಭಿಮಾನಿ ಮಹಿಳಾ ತಳವಾರ ಪ.ಪಂಗಡ ಹಿತರಕ್ಷಣಾ ಸಮಿತಿಯು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಜೊತೆಗೆ ವಿವಿಧ ರಂಗದಲ್ಲೂ ಮಹಿಳೆಯರಿಗೆ ಜಾಗೃತಿ ನೀಡಲಿ. ಮಹಿಳೆಯರಿಗೆ ಉತ್ತಮ ಭವಿಷ್ಯಕ್ಕೆ ಬೆಳಕಾಗಿ ನಿಲ್ಲಲ್ಲಿ ಎಂದರು.
ಇದೇ ಸಂದರ್ಭದಲ್ಲಿ ಬುಯ್ಯಾರ ಗ್ರಾಮ ಪಂಚಾಯತ್ ಅಧ್ಯಕ್ಷಿ ಲಕ್ಷ್ಮಿ ವಗ್ಗಿ ಮಾತಾನಾಡಿದ ಅವರು, ತೊಟ್ಟಿಲು ತೂಗುವ ಕೈ ದೇಶವನ್ನು ಆಗಬಹುದು. ಆದರೆ ಶಿಕ್ಷಣ ಮತ್ತು ಜಾಗೃತಿಯ ಕೊರತೆಯಿಂದ ಕಷ್ಟ ಅನುಭವಿಸುವಂತ್ತಾಗಿದೆ. ಇನ್ನೂ ನಮ್ಮ ಸಮುದಾಯದಲ್ಲಿ ಮೂಡ ನಂಬಿಕೆ ಹೆಚ್ಚಾಗಿದ್ದು, ಶಿಕ್ಷಣ ಮತ್ತು ಸಂಘಟನೆಯ ಕೊರತೆಯಿಂದ. ನಮ್ಮ ಸಮುದಾಯದ ಮಹಿಳೆಯರು ಹಲವಾರು ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಹಾಗಾಗಿ ಸಂಘಟನೆ ಬಲಿಷ್ಟ ಪಡಿಸಲು ಮಹಿಳೆಯರು ಮುಂದಾಗಬೇಕು. ಮಹಿಳೆ ಇಂದು ವಿಮಾನ ಹಾರಿಸಬಲ್ಲಳು ಅಷ್ಟೇ ಏಕೆ ಅಂತರಿಕ್ಷಕ್ಕೂ ಹಾರಿಬಲ್ಲಳು ತೊಟ್ಟಿಲು ತೂಗಲು ಅಷ್ಟೆ ಸೀಮಿತವಾಗದ ಹೆಣ್ಣು ವಿಜ್ಞಾನ-ತಂತ್ರಜ್ಞಾನದಲ್ಲೂ ಮುಂಚೂಣಿಯಲ್ಲಿದ್ದಾಳೆ. ಮಹಿಳೆ ನಿಸ್ವಾರ್ಥಿ,ಪರೋಪಕಾರಿ ಹೀಗಾಗಿ ಮಹಿಳೆ ಸಬಲೀಕರಣದತ್ತ ಹೆಜ್ಜೆ ಹಾಕಿದ್ದು ಸ್ವಾಗತಾರ್ಹ ಇನ್ನೂ ಹಳ್ಳಿ ಹಳ್ಳಿಗೂ ಮಹಿಳಾ ಜಾಗೃತಿ ಕಾರ್ಯಕ್ರಮ ನಡೆಯಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ಶಾರದಾ ಎಂ ತಳವಾರ, ಕವಿತಾ ಬೊಮ್ಮನಹಳ್ಳಿ, ಪವಿತ್ರ ನಾಲ್ವರ, ನಿಂಗಮ್ಮ, ಗಂಗೂಬಾಯಿ, ಶಾರದಾ ಪ್ರೀಯಂಕಾ, ಸರೋಜಿನಿ, ಶೀಲಾ ಹಳ್ಳಿ, ಶೀಲಾ ಬಸರಕೋಡ,ಜ್ಯೋತಿ ಬಸರಕೋಡ,ಸುವರ್ಣಾ, ಸಾವಿತ್ರಿ, ಭಾಗ್ಯ ಪಾಟೀಲ, ರೇಖಾ ವಗ್ಗಿ, ರೇಖಾ ದ್ಯಾಮಗೊಳ,ಭುವನೇಶ್ವರಿ ವಗ್ಗಿ,ಜಯಮಾಲಾ,ಪಾರ್ವತಿ ಕೋಳಿ ಇನ್ನೂ ಅನೇಕರು ಉಪಸ್ಥಿತರಿದ್ದರು.
ಪ್ರಜಾತಾ ಜಮಾದಾರ ಸ್ವಾಗತಿಸಿದರು,ಭಕ್ತಿ ಜಮಾದಾರ ನಿರೂಪಿಸಿದರು, ವಂದನಾರ್ಪಣೆ ದೀಪಿಕಾ ಸಾತಿಹಾಳ ನೆರೆವರಿಸಿದರು.