ಇಂಡಿಯಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ಜಾಥಾ
ಇಂಡಿ: ಪಟ್ಟಣದ ಎಸ್.ಎಸ್.ವಿ.ವಿ. ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕಾ ಆಸ್ಪತ್ರೆ ಎನ್.ಸಿ.ಡಿ ಘಟಕ ಹಾಗೂ ಎನ್.ಎಸ್.ಎಸ್, ರೆಡ್ ಕ್ರಾಸ್ ಮತ್ತು
ಸ್ಕೌಟ್ಸ್ ಗೈಡ್ಸ್ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ಸೋಮವಾರ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ.ರವಿ ಭತಗುಣಕಿ ಮಾತನಾಡಿ, “ಮಾರಕ ಕಾಯಲೆಯಾದ ಕ್ಯಾನ್ಸರ್ ರೋಗದ ಕುರಿತು ಕ್ಯಾನ್ಸರ್ ಜಾಗತಿಕ ಮಟ್ಟದಲ್ಲಿ ಸಾವಿನ ಎರಡನೆಯ ಪ್ರಮುಖ ಕಾರಣವಾಗಿದೆ. ಶೇಕಡಾ ಮೂರನೆಯ ಒಂದರಷ್ಟು ಕ್ಯಾನ್ಸರ್‍ಗಳಿಗೆ ನಮ್ಮ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ದತಿಗಳೇ ಪ್ರಮುಖ ಕಾರಣ ಎಂದರು.
ಕಡಿಮೆ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆ, ಕುಂಟಿತ ದೈಹಿಕ ಚಟುವಟಿಕೆ, ತಂಬಾಕು ಸೇವನೆ, ಧೂಮ್ರಪಾನ- ಮಧ್ಯಪಾನದ ಅತೀಯಾದ ಸೇವನೆ, ಅಲ್ಟ್ರಾ ವೈಲೆಟ್ ವಿಕೀರಣಗಳು ನಗರ ಪ್ರದೇಶದಲ್ಲಿನ ಅತೀಯಾದ ವಾಯುಮಾಲಿನ್ಯ ಮತ್ತು ರಾಸಾಯನಿಕ – ಯುಕ್ತ ಸೌಂದರ್ಯವರ್ಧಕಗಳ ಬಳಕೆ ಕ್ಯಾನ್ಸರ್‍ಗೆ ಕಾರಾಣವಾಗುವ ಅಂಶಗಳಾಗಿವೆ. ಶೇಕಡಾ ಮೂರನೆಯ
ಒಂದು ಭಾಗದಷ್ಟು ಕ್ಯಾನ್ಸರ್‍ನ್ನು ಸಂಭವಿಸುವ ಹಂತದಲ್ಲಿ
ತಡೆಗಟ್ಟಬಹುದು. ಕ್ಯಾನ್ಸರ್ ಮುಕ್ತಿಗೆ ಮೂರು ಮುಖ್ಯ
ಮಂತ್ರಗಳೆಂದರೆ ನಿರಂತರವಾಗಿ ಅರಿವು ಮೂಡಿಸುವುದು ಮತ್ತು ಆರೈಕೆಗೆ ಅವಕಾಶವನ್ನು ಕಲ್ಪಿಸುವುದು, ಶೀಘ್ರ ಪತ್ತೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಕೊಡಿಸುವುದು. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗುವಂತೆ
ಕ್ರಮ ವಹಿಸುವುದಾಗಿದೆ. ಎನ್.ಸಿ.ಡಿ ಘಟಕದೊಂದಿಗೆ ಕೈಜೋಡಿಸಿ ನಿರಂತರವಾಗಿ ಅರಿವು ಮೂಡಿಸುವ ಕೆಲಸವನ್ನು ಎಲ್ಲರೂ ಮಾಡುವ ಆ ಮೂಲಕ ಕ್ಯಾನ್ಸರ್ ಮುಕ್ತ ಸಮಾಜವನ್ನು ನಿರ್ಮಿಸೋಣ.” ಎಂದು
ಹೇಳಿದರು.
ಈ ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಗಳಾದ ತಂಬಾಕು ವಿಭಾಗದ ಆತ್ಮ ಸಮಾಲೋಚಕಿ ಕುಮಾರಿ. ಭಾಗ್ಯಶ್ರೀ ರಾಯಣ್ಣವರ, ಆಯ್‍ಸಿಟಿಸಿ ಆಪ್ತಸಮಾಲೋಚಕ ಕೆ.ಜಿ.ಶೀಲವಂತ, ಬಸವರಾಜ ಅಹಿರಸಂಗ ಮತ್ತು ಮಲ್ಲಿಕಾರ್ಜುನ ಸಿಂಘೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನಂತರ ಸುಮಾರು
ಇನ್ನೂರು ವಿದ್ಯಾರ್ಥಿಗಳೊಂದಿಗೆ ಇಂಡಿಯ ವಿದ್ಯಾನಗರ ಹಾಗೂ ಬಸವರಾಜೇಂದ್ರ ನಗರದಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಡಾ.
ಎಸ್.ಬಿ.ಜಾಧವ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಹಾಯಕ ಪ್ರಾಧ್ಯಾಪಕ ಡಾ.ವಿಶ್ವಾಸ ಕೋರವಾರ, ಸ್ವಾಗತ, ಡಾ.ಸುರೇಂದ್ರ ಕೆ, ವಂದನಾರ್ಪಣೆಯನ್ನು ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಯಾದ ಡಾ.ಪಿ.ಕೆ.ರಾಠೋಡ ಅವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಾ.ಆನಂದ ನಡವಿನಮನಿ, ಶ್ರೀಶೈಲ ಸಣ್ಣಕ್ಕಿ, ಡಾ.ಸಿ.ಎಸ್.ಬಿರಾದಾರ, ಡಾ.ಜಯಪ್ರಸಾದ ಡಿ, ಡಾ.ಶ್ರೀಕಾಂತ ರಾಠೋಡ
ಎಮ್.ಆರ್.ಕೋಣದೆ, ಶಿವಾನಂದ ಕಂಬಾರ, ಶೃತಿ ಪಾಟೀಲ, ಭಾರತಿ ಕನ್ನೊಳ್ಳಿ, ಪಂಕಜಾ ಕುಲಕರ್ಣಿ, ಶೃತಿ ಬಿರಾದಾರ ಬಲರಾಮ ವಡ್ಡರ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಇಂಡಿ: ಪಟ್ಟಣದ ಎಸ್.ಎಸ್.ವಿ.ವಿ. ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ
ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕಾ ಆಸ್ಪತ್ರೆ ಎನ್.ಸಿ.ಡಿ ಘಟಕ ಹಾಗೂ ಎನ್.ಎಸ್.ಎಸ್, ರೆಡ್ ಕ್ರಾಸ್ ಮತ್ತು ಸ್ಕೌಟ್ಸ್ ಗೈಡ್ಸ್ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ಸೋಮವಾರ ಜರುಗಿತು.