ಲಿಂಗಸೂಗೂರು: ತಾಲೂಕಿನ ಹಲಕಾವಟಗಿ ಗ್ರಾಮದಲ್ಲಿ ನಾಗರಹಾಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜೂಲಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು 8 ಪ್ರಶಸ್ತಿಗಳನ್ನು ಗೆದ್ದು ಕುಣಿದು ಕುಪ್ಪಳಿಸಿದ್ದಾರೆ.
ಬಾಲಕರ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಹಾಗೂ ತ್ರೋಬಾಲಿನಲ್ಲಿ ಪ್ರಥಮ ಸ್ಥಾನ ಪಡೆದರೆ, ಹೆಣ್ಣು ಮಕ್ಕಳ ತ್ರೋಬಾಲಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅಲ್ದೆ ರೀಲೆಯಲ್ಲಿ ಪ್ರಥಮ ಸ್ಥಾನ ಹಾಗೂ ವೈಯಕ್ತಿಕ ವಿಭಾಗದ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದು ಗೆಲುವಿನ ನಗೆ ಬೀರಿದರು.
ಇನ್ನು 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ವೀರಾಗ್ರಾಣಿ ಪ್ರಶಸ್ತಿಯನ್ನು ಸಹ ಪಡೆದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಮಕ್ಕಳ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಕರಾದ ಪರಶುರಾಮ್ ಮೇಟಿ ಹಾಗೂ ಟೀಮ್ ಮ್ಯಾನೇಜರ್ ಆದ ರಮೇಶ ದೊಡ್ಡಕಾರಗಿ ಮುಖ್ಯ ಗುರುಗಳಾದ ಯಲ್ಲಪ್ಪ ಚಲವಾದಿ ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂಧಿಸಿದ್ದಾರೆ.